ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಎರಡನೇ ದಿನ ಮಳೆ ಅಡ್ಡಿಯಿರುತ್ತಾ? ಇಲ್ಲಿದೆ ಹವಾಮಾನ ವರದಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಬುಧವಾರದಿಂದ (ಆಗಸ್ಟ್ 4) ಆರಂಭವಾಗಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲನೇ ದಿನ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜೋ ರೂಟ್ ಆಯ್ಕೆ ಮೊದಲ ದಿನವೇ ತಲೆಕೆಳಗಾಗಿದೆ. ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಗೊಂಡ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಾ ಹೋದರು. ಪಂದ್ಯದ ಮೊದಲ ಓವರ್‌ನಲ್ಲಿಯೇ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ರೊರಿ ಬರ್ನ್ಸ್ ಜಸ್ ಪ್ರೀತ್ ಬೂಮ್ರಾ ಎಸೆತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ನಂತರ ಯುವ ಆಟಗಾರರಾದ ಡೊಮಿನಿಕ್ ಸಿಬ್ಲೆ ಮತ್ತು ಜ್ಯಾಕ್ ಕ್ರಾವ್ಲೆ ಉತ್ತಮ ಹೊಡೆತಗಳನ್ನು ಬಾರಿಸಿದರು ಕೂಡ ಹೆಚ್ಚು ಹೊತ್ತು ಮೈದಾನದಲ್ಲಿರುವ ಅವಕಾಶವನ್ನು ಭಾರತೀಯ ಬೌಲರ್‌ಗಳು ನೀಡಲಿಲ್ಲ.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 108 ಎಸೆತಗಳಿಗೆ 64 ರನ್ ಬಾರಿಸಿ ಇಂಗ್ಲೆಂಡ್ ತಂಡ ಸಾಧಾರಣ ಮೊತ್ತ ತಲುಪುವಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಿದರು. ಜೋ ರೂಟ್ ಹೊರತುಪಡಿಸಿದರೆ ಜಾನಿ ಬೇರ್‌ಸ್ಟೋ 29 ಮತ್ತು ಸ್ಯಾಮ್ ಕರನ್ ಕೊನೆಯ ಹಂತದಲ್ಲಿ ಅಜೇಯ 27 ರನ್ ಬಾರಿಸಿ ಗಮನ ಸೆಳೆದರು. ಇಷ್ಟು ಬಿಟ್ಟರೆ ಇಂಗ್ಲೆಂಡ್ ತಂಡದ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳೂ ಉತ್ತಮ ಪ್ರದರ್ಶನ ನೀಡುವ ಪ್ರಯತ್ನ ಮಾಡಲೇ ಇಲ್ಲ. ಹೀಗಾಗಿ ಇಂಗ್ಲೆಂಡ್ 183 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಆಟವನ್ನು ಮುಗಿಸಿತು. ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ 21 ರನ್ ಗಳಿಸಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಸ್ಥಿತಿಯಲ್ಲಿದೆ.
{photo-feature}
ಹೀಗೆ ಮೊದಲ ಪಂದ್ಯದ ಮೊದಲನೇ ದಿನ ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪಂದ್ಯದ ಮೇಲೆ ಟೀಮ್ ಇಂಡಿಯಾ ಹಿಡಿತ ಸಾಧಿಸಲು ನೆರವಾಗಿದ್ದಾರೆ. ಇದೇ ರೀತಿ ಎರಡನೇ ದಿನ ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಒಂದುವೇಳೆ ಹವಾಮಾನ ವರದಿಯ ಪ್ರಕಾರ ಮಳೆ ಬಂದರೆ ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡುವ ಸ್ಥಿತಿ ಎದುರಾದರೂ ಎದುರಾಗಬಹುದು. ಹೀಗಾಗಿ ಮೊದಲನೇ ಸೆಷನ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಕಲೆಹಾಕುವ ಪ್ರಯತ್ನ ಮಾಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications