ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ v ಇಂಗ್ಲೆಂಡ್ 2ನೇ ಟೆಸ್ಟ್: ಮೊದಲ ದಿನ ಪಂದ್ಯ ಮಳೆಗೆ ಆಹುತಿ

India vs England Highlights, 2nd Test, Day 1: Rain Washes Out Play

ಲಂಡನ್, ಆಗಸ್ಟ್ 9: ಲಂಡನ್ ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್ ನ ಮೊದಲ ದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಆರಂಭಿಕ ದಿನವಾದ ಗುರುವಾರ (ಆ.9) ಬೆಳಗ್ಗಿನಿಂದಲೂ ಸುರಿದ ಮಳೆಯಿಂದಾಗಿ ಪಂದ್ಯ ರದ್ದಾಯಿತು.

ಕೆಪಿಎಲ್ ಫೈನಲ್ಸ್ ಗೆ ಸಾಕ್ಷಿಯಾಗಲಿದೆ ಸಾಂಸ್ಕೃತಿಕ ನಗರಿ ಮೈಸೂರುಕೆಪಿಎಲ್ ಫೈನಲ್ಸ್ ಗೆ ಸಾಕ್ಷಿಯಾಗಲಿದೆ ಸಾಂಸ್ಕೃತಿಕ ನಗರಿ ಮೈಸೂರು

ಮೊದಲ ಟೆಸ್ಟ್ ನಲ್ಲಿ ಭಾರತ ಆಂಗ್ಲರೆದುರು 31 ರನ್ ಗಳಿಂದ ಸೋತಿತ್ತು. ಹೀಗಾಗಿ ದ್ವಿತೀಯ ಟೆಸ್ಟ್ ಗೆದ್ದುಕೊಳ್ಳುವತ್ತ ಭಾರತ ಚಿತ್ತ ನೆಟ್ಟಿತ್ತು. ಆದರೆ ಮೊದಲ ದಿನವಾದ ಗುರುವಾರ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ 3.30pmಗೆ ಆರಂಭವಾಗಬೇಕಿದ್ದ ಪಂದ್ಯ ಮುಂದೂಡಲ್ಪಟ್ಟಿತು. ಟಾಸ್ ನಡೆಸುವುದಕ್ಕೂ ಮಳೆ ಅವಕಾಶ ಕೊಡಲಿಲ್ಲ.

ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್-ಭಾರತದ ಮುಖಾಮುಖಿ ಸಹಜವಾಗೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದಕ್ಕೆ ಕಾರಣ ಇದೇ ಮೈದಾನದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ಕಂಡಿದ್ದ ಏಳು-ಬೀಳುಗಳು. ಲಾರ್ಡ್ಸ್ ನಲ್ಲಿ ಈ ಹಿಂದಿನ 17 ಟೆಸ್ಟ್ ಪಂದ್ಯಗಳಲ್ಲಿ ಭಾರತ ಎರಡು ಸಾರಿಯಷ್ಟೇ ಗೆದ್ದಿದ್ದು, ನಾಲ್ಕು ಸಾರಿ ಡ್ರಾ ಗೊಳಿಸಿಕೊಂಡಿತ್ತು.

ಎಜ್ ಬಾಸ್ಟನ್ ನಲ್ಲಿ ಭಾರತದೆದುರು 1000ನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಬೀಗಿತ್ತು. ಆ ಪಂದ್ಯದಲ್ಲಿ ಭಾರತದ ನಾಯಕ ಕೊಹ್ಲಿಯ ಏಕಾಂಗಿ ಹೋರಾಟ ಬಿಟ್ಟರೆ ಉಳಿದ ಬ್ಯಾಡ್ಸ್ಮನ್ ಗಳ ಬೆಂಬಲ ತಂಡಕ್ಕೆ ಅಷ್ಟೇನೂ ಲಭಿಸದಿದ್ದುದೇ ಸೋಲಿಗೆ ಕಾರಣವಾಗಿತ್ತು. ಲಾರ್ಡ್ಸ್ ನಲ್ಲಿ ಭಾರತ ಚತುರ ಆಟ ಪ್ರದರ್ಶಿಸಿದರೆ ಗೆಲ್ಲಲು ಸಾಧ್ಯವಿದೆ.

Story first published: Thursday, August 9, 2018, 22:13 [IST]
Other articles published on Aug 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X