ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್, 5ನೇ ಟೆಸ್ಟ್: ಇಂಗ್ಲೆಂಡ್ ಗೆ 118 ರನ್ ಭರ್ಜರಿ ಜಯ

India vs England Highlights, 5th Test Day 5, Live Score

ಲಂಡನ್, ಸೆಪ್ಟೆಂಬರ್ 11: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಆಂಗ್ಲರೆದುರು ಅಂತಿಮ ಟೆಸ್ಟ್ ಪಂದ್ಯದಲ್ಲೂ ಸೋಲನುಭವಿಸಿದೆ. ಇಂಗ್ಲೆಂಡ್ ನೀಡಿದ್ದ 464 ರನ್ ಗುರಿ ಬೆನ್ನತ್ತಿದ ಭಾರತ ಯುವ ಬ್ಯಾಟ್ಸ್ಮನ್ ಗಳಾದ ರಿಷಬ್ ಪಂತ್ (114), ಕೆಎಲ್ ರಾಹುಲ್ (149) ಆಕರ್ಷಕ ಶತಕದ ಹೊರತಾಗಿಯೂ 345 ರನ್ ಪೇರಿಸುವುದರೊಂದಿಗೆ 118 ರನ್ ಸೋಲನುಭವಿಸಿತು.

ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42378

ದ್ವಿತೀಯ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ 101, ಕೆಎಲ್ ರಾಹುಲ್ 142 ರನ್ ಪೇರಿಸುವುದರೊಂದಿಗೆ ಭಾರತಕ್ಕೆ ಬೆಂಬಲವಾಗಿ ನಿಂತಿದ್ದರು. ಆದರೆ ಉಳಿದ ಬ್ಯಾಟ್ಸ್ಮನ್ ಗಳ ಬೆಂಬಲ ದೊರೆಯದೆ ಭಾರತ 94.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 435 ರನ್ ಪೇರಿಸಿತು. ಸರಣಿಯಲ್ಲಿ ಭಾರತ 4-1ರ ಹಿನ್ನಡೆ ಅನುಭವಿಸಿದೆ.

ದ್ವಿತೀಯ ಇನ್ನಿಂಗ್ಸ್ ಬಳಿಕ ಇಂಗ್ಲೆಂಡ್ ಭಾರತಕ್ಕೆ 464 ರನ್ ಗುರಿ ನೀಡಿತ್ತು. ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ಆಟಗಾರ ಅಲಾಸ್ಟೇರ್ ಕುಕ್ ಆಕರ್ಷಕ ಶತಕದ (147) ಮೂಲಕ ಗಮನ ಸೆಳೆದಿದ್ದರು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಅಲಾಸ್ಟೇರ್ ಕುಕ್, ಜೋ ರೂಟ್ ಶತಕದ ನೆರವಿನೊಂದಿಗೆ 112.3 ಓವರ್ ನಲ್ಲಿ 8 ವಿಕೆಟ್ ಕಳೆದು 423 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 40 ರನ್ ಹಿನ್ನಡೆ ಅನುಭವಿಸಿದ್ದರಿಂದ ಗೆಲುವಿಗೆ 464 ರನ್ ಬೃಹತ್ ರನ್ ಗುರಿ ಭಾರತದ ಮುಂದಿತ್ತು.

Story first published: Tuesday, September 11, 2018, 22:13 [IST]
Other articles published on Sep 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X