For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ 'ಹಿಟ್‌ಮ್ಯಾನ್‌' ರೋಹಿತ್ ಅಪರೂಪದ ದಾಖಲೆ!

India vs England: Hitman Rohit Sharma hits first Test century against England

ಚೆನ್ನೈ: ಇಂಗ್ಲೆಂಡ್‌ ಕ್ರಿಕೆಟ್ ತಂಡದ ವಿರುದ್ಧ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬಲು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನಲ್ಲಿ ರೋಹಿತ್ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್‌ ಶತಕ ಬಾರಿಸಿದ್ದಾರೆ.

ಕೇಳುವಾಗ ಅಚ್ಚರಿ ಅನ್ನಿಸಬಹುದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಈ ಮೊದಲೇ 36 ಪಂದ್ಯಗಳಲ್ಲಿ 11 ಅರ್ಧ ಶತಕ, 7 ಶತಕ, 1 ದ್ವಿಶತಕ ಬಾರಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದು ಇದೇ ಮೊದಲಬಾರಿ. ಈ ಸಾಧನೆಯನ್ನು ರೋಹಿತ್ 37ನೇ ಪಂದ್ಯದಲ್ಲಿ ಮಾಡಿದ್ದಾರೆ.

ಭಾರತ vs ಇಂಗ್ಲೆಂಡ್, 2ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49839

ಕ್ರಿಕೆಟ್ ಮಾದರಿಗಳಲ್ಲಿ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಯಶಸ್ವಿ ಬ್ಯಾಟ್ಸ್‌ಮನ್‌ ಅನ್ನಿಸಿಕೊಂಡಿದ್ದಾರೆ. 224 ಏಕದಿನ ಪಂದ್ಯಗಳಲ್ಲಿ 49.27ರ ಸರಾಸರಿಯಲ್ಲಿ 9115 ರನ್ ಬಾರಿಸಿದ್ದಾರೆ. ಇದರಲ್ಲಿ 29 ಶತಕ, 3 ದ್ವಿಶತಕ, 43 ಅರ್ಧಶತಕಗಳು ಸೇರಿವೆ.

ಚೆನ್ನೈ ಟೆಸ್ಟ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ಗೆ ಬಂದಿದ್ದ ರೋಹಿತ್, ಉಪನಾಯಕ ಅಜಿಂಕ್ಯ ರಹಾನೆ ಜೊತೆ ಉತ್ತಮ ಜೊತೆಯಾಟ ನೀಡಿದ್ದರು. ಟಾಸ್ ಗೆದ್ದು ಬ್ಯಾಟಿಂಗ್‌ ಮಾಡುತ್ತಿರುವ ಭಾರತದಿಂದ ರೋಹಿತ್ 72.6ನೇ ಓವರ್‌ನಲ್ಲಿ ಜ್ಯಾಕ್ ಲೀಚ್ ಎಸೆತಕ್ಕೆ ಮೊಯೀನ್ ಅಲಿಗೆ ಕ್ಯಾಚಿತ್ತು 161 ರನ್‌ಗೆ ನಿರ್ಗಮಿಸಿದರು.

Story first published: Saturday, February 13, 2021, 16:21 [IST]
Other articles published on Feb 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+