ಭಾರತವನ್ನು ಭಾರತದಲ್ಲಿ ಸೋಲಿಸೋದು ಬಲು ಕಷ್ಟ: ಇಯಾನ್ ಮಾರ್ಗನ್

ಅಹ್ಮದಾಬಾದ್: ಈ ವರ್ಷದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಹೇಗೆ ಆಡಲಿದೆ ಅನ್ನೋದು ಸಣ್ಣಮಟ್ಟಿಗೆ ಗೊತ್ತಾಗಲಿದೆ. ಶುಕ್ರವಾರ (ಮಾರ್ಚ್ 12) ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ಐದು ಪಂದ್ಯಗಳ ಟಿ20ಐ ಸರಣಿ ನಡೆಯಲಿದ್ದು, ಈ ಸರಣಿ ಭಾರತ-ಇಂಗ್ಲೆಂಡ್ ನಡುವಿನ ಬಲಾಬಲದ ಚಿತ್ರಣ ನೀಡಲಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 12ರಂದು 7 pmಗೆ ಭಾರತ-ಇಂಗ್ಲೆಂಡ್ ಟಿ20 ಪಂದ್ಯ ನಡೆಯಲಿದೆ. ಅದಾಗಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ 3-1ರಿಂದ ಗೆದ್ದಿದೆ.
ಭಾರತದಲ್ಲಿ ಟೀಮ್ ಇಂಡಿಯಾವನ್ನು ಎದುರುಗೊಳ್ಳುವ ಬಗ್ಗೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮಾತನಾಡಿದ್ದಾರೆ. 'ನಮ್ಮ ದೃಷ್ಟಿಕೋನದ ಪ್ರಕಾರ, ಈ ಟಿ20 ಸರಣಿ ನಮಗೆ ಕಲಿಕೆಯ ಪ್ರಕ್ರಿಯೆ ಶುರುವಾದಂತೆ. ಏಳು ತಿಂಗಳಲ್ಲಿ ನಾವು ವಿಶ್ವಕಪ್‌ನಲ್ಲಿ ಯಾವ ಸ್ಥಾನಗಳನ್ನು ಕಂಡುಕೊಳ್ಳಬಹುದು ಎಂದು ಅರಿತುಕೊಳ್ಳಲು ಇದು ಸಕಾಲ,' ಎಂದು ಮಾರ್ಗನ್ ಹೇಳಿದ್ದಾರೆ.
'ಈ ಸರಿಯಾದ ಕಾಲಘಟ್ಟದಲ್ಲಿ ನಾವು ವಿಶ್ವದ ಅತ್ಯುತ್ತಮ ತಂಡವನ್ನು ಅವರ ಮನೆಯಂಗಳದಲ್ಲೇ ಎದುರಿಸಲಿದ್ದೇವೆ. ತವರು ನೆಲದಲ್ಲಿ ಭಾರತವನ್ನು ಸೋಲಿಸೋದು ತುಂಬಾ ಕಷ್ಟದ ವಿಚಾರ,' ಎಂದು ಮಾರ್ಗನ್ ವಿವರಿಸಿದ್ದಾರೆ. ಐಪಿಎಲ್‌ನಲ್ಲಿ ಮಾರ್ಗನ್, ಮಾಜಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವ ವಹಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications