ಭಾರತ vs ಇಂಗ್ಲೆಂಡ್: ಗೆದ್ದ ವಿರಾಟ್ ಕೊಹ್ಲಿ ಪಡೆಗೆ 20 ಶೇ. ದಂಡ

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 14) ನಡೆದಿದ್ದ ಭಾರತ-ಇಂಗ್ಲೆಂಡ್ ದ್ವಿತೀಯ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ.
ದ್ವಿತೀಯ ಟಿ20ಐ ವೇಳೆ ಸ್ಲೋ ಓವರ್ ರೇಟ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ. ದ್ವಿತೀಯ ಪಂದ್ಯದಲ್ಲಿನ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮ್ಯಾಚ್ ರೆಫರೀ, ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ನಿಗದಿತ ಸಮಯದಲ್ಲಿ ಓವರ್ ಮುಗಿಸದಿದ್ದ ಕಾರಣಕ್ಕಾಗಿ ಕೊಹ್ಲಿ ಪಡೆಗೆ ದಂಡ ವಿಧಿಸಿದ್ದಾರೆ. ನಾಯಕ ಕೊಹ್ಲಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಭಾರತ-ಇಂಗ್ಲೆಂಡ್ ಮೂರನೇ ಟಿ20ಐ ಮಾರ್ಚ್ 16ರಂದು ನಡೆಯಲಿದೆ.
ಐಸಿಸಿ ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಾದರೆ ಫೀಲ್ಡಿಂಗ್ ಮಾಡುವ ತಂಡ ಗಂಟೆಗೆ 15ರಂತೆ ಓವರ್ ಮುಗಿಸಿರಬೇಕಾಗುತ್ತದೆ. ಅದೇ ಏಕದಿನದಲ್ಲಾದರೆ ಗಂಟೆಗೆ 14.28 ಓವರ್, ಟಿ20ಐನಲ್ಲಾದರೆ ಗಂಟೆಗೆ 14.11 ಓವರ್ ಮುಗಿಸಿರಬೇಕಾಗುತ್ತದೆ. ಈ ಕಾಲಾವಧಿ ಮೀರಿದರೆ ಫೀಲ್ಡಿಂಗ್ ತಂಡಕ್ಕೆ ದಂಡ ವಿಧಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications