ಇಂಗ್ಲೆಂಡ್‌ಗೆ ಗೊಂದಲ ಮೂಡಿಸಲು ಪ್ಲ್ಯಾನ್ ಮಾಡಿದೆಯೇ ಭಾರತ?!

ಅಹ್ಮದಾಬಾದ್: ಪ್ರವಾಸ ಸರಣಿಗಾಗಿ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಗೊಂದಲ ಮೂಡಿಸಲು ಪ್ಲ್ಯಾನ್ ಮಾಡಿದೆಯೇ ಭಾರತ? ಹೀಗೊಂದು ಮಾತುಗಳು ಕೇಳಿಬರುತ್ತಿವೆ. ಕಾರಣ; ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅಹ್ಮದಾಬಾದ್‌ನಲ್ಲಿ ಎರಡು ವಿಭಿನ್ನ ರೀತಿಯ ಪಿಚ್‌ಗಳನ್ನು ಭಾರತ ತಯಾರಿಸಿದೆ ಎನ್ನಲಾಗಿದೆ.
ಭಾರತ-ಇಂಗ್ಲೆಂಡ್ ಮಧ್ಯೆ ಸದ್ಯ ಟೆಸ್ಟ್ ಸರಣಿ ನಡೆಯುತ್ತಿದೆ. ಎರಡು ಪಂದ್ಯಗಳು ಮುಗಿದಿದ್ದು ಸರಣಿ 1-1ರಿಂದ ಸಮಬಲಗೊಂಡಿದೆ. ಮೂರನೇ ಪಂದ್ಯ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಿಂದ ಆರಂಭಗೊಳ್ಳಲಿದೆ. ಎರಡು ವಿಭಿನ್ನ ಪಿಚ್‌ಗಳಿದ್ದರೆ ಅಂತಿಮ ಪಿಚ್ ಯಾವುದೆಂದು ಪಂದ್ಯಕ್ಕೆ ಮುನ್ನ ಐಸಿಸಿ ಅಧಿಕಾರಿಗಳಿಗೆ 48 ಗಂಟೆಗಳ ಮುಂಚಿತವಾಗಿಯಷ್ಟೇ ತಿಳಿಸಲಾಗುತ್ತದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ. ಹೀಗಾಗಿ ಸರಣಿ ಗೆದ್ದು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಭಾರತ ಯೋಚಿಸಿದೆ. ಹೀಗಾಗಿಯೇ ಮೊಟೆರಾದಲ್ಲಿ ಎರಡು ಭಿನ್ನ ಪಿಚ್‌ಗಳನ್ನು ಭಾರತ ತಯಾರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
'ನೆಲದಲ್ಲಿ ಎರಡು ರೀತಿಯ ಪಟ್ಟಿಗಳು ಸಿದ್ಧವಾಗಿವೆ. ಈ ಎರಡರಲ್ಲಿ ಒಂದರಲ್ಲಿ, ಕಪ್ಪು ಬಣ್ಣದ ಮಣ್ಣನ್ನು ಬಳಸಲಾಗುತ್ತದೆ. ಈ ಸ್ಟ್ರಿಪ್ ವೇಗ ಮತ್ತು ಬೌನ್ಸ್‌ನೊಂದಿಗೆ ವೇಗಿಗಳಿಗೆ ಸಹಾಯ ಮಾಡಲಿದೆ. ಇನ್ನೊಂದು ಪಿಚ್ ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದೆ, ಅಲ್ಲಿ ಸ್ಪಿನ್ನರ್‌ಗಳು ಹೆಚ್ಚುವರಿ ತಿರುವು ಮತ್ತು ಬೌನ್ಸ್ ಅನ್ನು ಕಂಡುಕೊಳ್ಳುತ್ತಾರೆ,' ಎಂದು ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications