Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೆಬ್ರವರಿ 18ರಂದು ಅಹ್ಮದಾಬಾದ್‌ಗೆ ಟೀಮ್ ಇಂಢಿಯಾ ಪ್ರಯಾಣ

India vs England: Indian team to depart for Ahmedabad on Thursday

ಅಹ್ಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಆಡುತ್ತಿರುವ ಟೀಮ್ ಇಂಡಿಯಾ ತೃತೀಯ ಟೆಸ್ಟ್‌ ಪಂದ್ಯಕ್ಕಾಗಿ ಫೆಬ್ರವರಿ 18ರ ಭಾನುವಾರ ಅಹ್ಮದಾಬಾದ್‌ಗೆ ಪ್ರಯಾಣ ಬೆಳೆಸಲಿದೆ. ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1, ಇಂಗ್ಲೆಂಡ್ 1 ಪಂದ್ಯ ಗೆದ್ದು ಸರಣಿ ಸಮಬಲಗೊಂಡಿದೆ. ತೃತೀಯ ಪಂದ್ಯ ಫೆಬ್ರವರಿ 24ರಿಂದ ಫೆಬ್ರವರಿ 28ರ ವರೆಗೆ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ. 9:30 AMಗೆ ಪಂದ್ಯ ಆರಂಭಗೊಳ್ಳಲಿದೆ. ಫೆಬ್ರವರಿ 18ರಂದು ಚೆನ್ನೈನಲ್ಲಿ 2021ರ ಐಪಿಎಲ್‌ಗೆ ಹರಾಜು ನಡೆಯಲಿದೆ. ಆದರೆ ಈ ದಿನವೇ ಟೀಮ್ ಇಂಡಿಯಾ ಅಹ್ಮದಾಬಾದ್‌ಗೆ ಪ್ರಯಾಣಿಸಲಿದೆ.

ತೃತೀಯ ಟೆಸ್ಟ್‌ ಪಂದ್ಯ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯ (ಡೇ-ನೈಟ್ ಟೆಸ್ಟ್) ಆಗಿರಲಿದೆ. ಸರ್ದಾರ್ ಪಟೇಲ್ ಸ್ಟೇಡಿಯಂ (ಮೊಟೆರಾ) ಸ್ಟೇಡಿಯಂ ಮರುನಿರ್ಮಾಣವಾಗಿರುವ ಬೃಹತ್ ಸ್ಟೇಡಿಯಂ. ಈಗ ಈ ಸ್ಟೇಡಿಯಂನ ಸಾಮರ್ಥ್ಯ 1,10,000ಕ್ಕೆ ಏರಿಕೆಯಾಗಿದೆ.

ತೃತೀಯ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ವೇಗಿ ಉಮೇಶ್ ಯಾದವ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವೇಗಿ ಶಾರ್ದೂಲ್ ಠಾಕೂರ್ ಬದಲು ಯಾದವ್ ಅವರನ್ನು ಹೆಸರಿಸಲಾಗಿದೆ. ಭಾರತ-ಇಂಗ್ಲೆಂಡ್ ಆರಂಭಿಕ ಎರಡೂ ಟೆಸ್ಟ್‌ ಪಂದ್ಯಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತು.

Story first published: Wednesday, February 17, 2021, 23:14 [IST]
Other articles published on Feb 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+