ಭಾರತ vs ಇಂಗ್ಲೆಂಡ್: ಶುಬ್ಮನ್ ಗಿಲ್ ಗರಿಷ್ಠ 8 ವಾರ ಕ್ರಿಕೆಟ್‌ನಿಂದ ದೂರ!

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿದ್ದ ಭಾರತದ ಯುವ ಬ್ಯಾಟ್ಸ್‌ಮನ್ ಶುಬ್ಮನ್‌ಗಿಲ್ ಗಾಯಕ್ಕೀಡಾಗಿ ಪ್ರವಾಸ ಸರಣಿಯಿಂದ ಹೊರ ಬಿದ್ದಿದ್ದಾರೆ. ಕಾಲಿನ ಗಾಯಕ್ಕೀಡಾಗಿರುವ ಗಿಲ್ ಇನ್ನು ಏನಿಲ್ಲವಾದರೂ 6 ರಿಂದ 8 ವಾರಗಳ ಕಾಲ ಅಂದರೆ ಸುಮಾರು 2 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಇರಬೇಕಾಗಿದೆ.
ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಶುಬ್ಮನ್ ಗಿಲ್ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಆಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಗಿಲ್ ಕ್ರಮವಾಗಿ 28, 8 ರನ್ ಗಳಿಸಿದ್ದರು. ಆದರೆ ಪಂದ್ಯದ ಬಳಿಕ ಅಭ್ಯಾಸದ ವೇಳೆ ಗಿಲ್ ಕಾಲಿಗೆ ಗಾಯ ಮಾಡಿಕೊಂಡಿದ್ದರು.
ಮುಂದೆ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಜೊತೆಯಾಗಿ ಯಾರು ಆಡಲಿದ್ದಾರೆ ಅನ್ನೋದು ಬಿಸಿಸಿಐಗೆ ತಲೆನೋವು ನೀಡಿದೆ. ಯಾಕೆಂದರೆ ಗಿಲ್ ಬಿಟ್ಟರೆ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರೂ ಫಾರ್ಮ್‌ನಲ್ಲಿ ಇದ್ದಂತಿಲ್ಲ. ಕಾರಣ ಹತ್ತಿರ 2 ವರ್ಷದಿಂದ ಇಬ್ಬರೂ ಟೆಸ್ಟ್ ಪಂದ್ಯ ಆಡಿಲ್ಲ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಜುಲೈ 20-22ರ ವರೆಗೆ ಭಾರತ-ಇಂಗ್ಲೆಂಡ್ ತಂಡಗಳ ಮಧ್ಯೆ ಅಭ್ಯಾಸ ಪಂದ್ಯ ನಡೆಯಲಿದೆ. WTC ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಭಾರತದ ಪ್ರದರ್ಶನ ಆಂಗ್ಲರೆದುರು ಹೇಗಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications