ಆಡಿದ 15 ಪಿಂಕ್ ಬಾಲ್ ಟೆಸ್ಟ್‌ಗಳ ಕುತೂಹಲಕಾರಿ ಅಂಕಿಅಂಶಗಳು ಇಲ್ಲಿದೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಬದಲಾವಣೆ ಹಾಗೂ ಪ್ರೇಕ್ಷಕರನ್ನು ಮತ್ತಷ್ಟು ಸೆಳೆಯುವ ದೃಷ್ಟಿಯಿಂದ ಡೇ-ನೈಟ್ ಟೆಸ್ಟ್ ಪಂದ್ಯಗಳು ಆಯೋಜನೆಯಾಗಲು ಆರಂಭಿಸಿದವರು. ಭಾರತ 2019ರ ಅಂತ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಡೇ ನೈಟ್ ಪಂದ್ಯವನ್ನಾಡುವ ಮೂಲಕ ಅಂತಿಮವಾಗಿ ಈ ಅಹರ್ನಿಶಿ ಪಂದ್ಯದಲ್ಲಿ ಪಾಲ್ಗೊಂಡ ಟೆಸ್ಟ್ ಮಾನ್ಯತೆ ಪಡೆದ ತಂಡ ಎನಿಸಿಕೊಂಡಿತು. ಇದೀಗ ಭಾರತ ತನ್ನ ಮೂರನೇ ಡೇ-ನೈಟ್ ಪಿಂಕ್ ಬಾಲ್ ಪಂದ್ಯವನ್ನಾಡಲು ಸಜ್ಜಾಗಿದೆ.
ಒಟ್ಟಾರೆಯಾಗಿ ಕ್ರಿಕೆಟ್‌ನಲ್ಲಿ ಈವರೆಗೆ 15 ಪಿಂಕ್‌ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿಸಲಾಗಿದೆ. ಕ್ರಿಕೆಟ್‌ನ ಸುದೀರ್ಘ ಮಾದರಿಯಲ್ಲಿನ ಈ ಬದಲಾವಣೆಗೆ ಸಾಕಷ್ಟು ಉತ್ತಮ ಬೆಂಬಲಗಳು ವ್ಯಕ್ತವಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಮೈದಾನದತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಈ ಕ್ರಿಕೆಟ್ ಡೇ ನೈಟ್ ಟೆಸ್ಟ್ ಪಂದ್ಯಗಳ ಕೆಲ ಕುತೂಹಲಕಾರಿ ಅಂಕಿಅಂಶ ಹಾಗೂ ಮಾಹಿತಿಗಳು ನಿಮಗಾಗಿ ಮುಂದೆ ಓದಿ:

ಇಂಗ್ಲೆಂಡ್ ತಂಡದ ಅಂಕಿಅಂಶ
-ಇಂಗ್ಲೆಂಡ್ 3 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 1 ಗೆಲುವು 2 ಸೋಲಿನ ಫಲಿತಾಂಶವನ್ನು ಪಡೆದುಕೊಂಡಿದೆ. ಇಂಗ್ಲೆಂಡ್ ಮೊದಲಿಗೆ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ಪಿಂಕ್ ಬಾಲ್ ಪಂದ್ಯವನ್ನಾಡಿದ್ದರು ಇದರಲ್ಲಿ 209 ರನ್‌ಗಳ ಗೆಲುವು ಪಡೆದಿತ್ತು.
-ಇಂಗ್ಲೆಂಡ್ 2017 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿದ್ದರೆ ಆಕ್ಲೆಂಡ್‌ನಲ್ಲಿ 2018 ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ ಸೋಲು ಕಂಡಿತ್ತು.
-ಇಂಗ್ಲೆಂಡ್ ನ್ಯೂಜಿಲೆಂಡ್‌ಗೆ ಇನ್ನಿಂಗ್ಸ್ ಹಾಗೂ 49 ರನ್‌ಗಳ ಅಂತರದಿಂದ ಸೋಲು ಕಂಡಿತ್ತು.

ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ
-ಭಾರತ ಎರಡು ಪಿಂಕ್ ಬಾಲ್ ಪಂದ್ಯಗಳನ್ನು ಆಡಿದ್ದು ಬಾಂಗ್ಲಾದೇಶದ ವಿರುದ್ಧ ಆಡಿದ ಮೊದಲ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 46 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.
-ಭಾರತ ಒಂದು ಪಂದ್ಯ ತವರಿನಲ್ಲಿ ಹಾಗೂ ಒಂದು ವಿದೇಶಿ ನೆಲದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿದೆ
-ಭಾರತ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾಗೆ 8 ವಿಕೆಟ್‌ಗಳ ಅಂತರದಿಂದ ಶರಣಾಗಿತ್ತು.

ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಯಶಸ್ವಿ ತಂಡ
-8 ಬಾರಿ ಟಾಸ್ ಗೆದ್ದ ತಂಡ ಗೆಲುವನ್ನು ಸಾಧಿಸಿದೆ.
-ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವೀ ತಂಡವೆನಿಸಿದೆ. ಆಡಿದ 8 ಪಂದ್ಯಗಳಲ್ಲೂ ಅದು ಗೆಲುವು ಸಾಧಿಸಿದೆ.(ಎಲ್ಲವೂ ತವರಿನಲ್ಲಿ ನಡೆದ ಪಂದ್ಯಗಳು)
-ಶ್ರೀಲಂಕಾ ಎರಡನೇ ಯಶಸ್ವೀ ತಂಡ ಎನಿಸಿದೆ. ಆಡಿದ ಮೂರು ಪಂದ್ಯಗಳಲ್ಲಿ ಶ್ರೀಲಂಕಾ 2 ಪಂದ್ಯಗಳಲ್ಲಿ ಗೆದ್ದುಕೊಂಡಿದೆ.
-ಕನಿಷ್ಟ ಸ್ಕೋರ್- ಟೀಮ್ ಇಂಡಿಯಾ - 36 ರನ್, ಎದುರಾಳಿ ತಂಡ ಆಸ್ಟ್ರೇಲಿಯಾ ಡಿಸೆಂಬರ್ 2020
-ಗರಿಷ್ಠ ಸ್ಕೋರ್- ಆಸ್ಟ್ರೇಲಿಯಾ- 589/3d, ಎದುರಾಳಿ ಪಾಕಿಸ್ತಾನ

ವೈಯಕ್ತಿಕ ಸಾಧನೆಗಳು
-ಸ್ಪಿನ್ನರ್‌ಗಳು- 115 ವಿಕೆಟ್, ವೇಗಿಗಳು- 354 ವಿಕೆಟ್
-ಸ್ಟಾರ್ಕ್- 8 ಪಂದ್ಯಗಳಿಂದ 46 ವಿಕೆಟ್(ವೇಗಿಗಳಲ್ಲಿ ಅತಿ ಹೆಚ್ಚು)
-ಲಿಯೋನ್- 8 ಪಂದ್ಯಗಳಿಮದ 29 ವಿಕೆಟ್(ಸ್ಪಿನ್ನರ್‌ಗಳಲ್ಲಿ ಅತಿ ಹೆಚ್ಚು)
-ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. (6 ಪಂದ್ಯಗಳಲ್ಲಿ 596 ರನ್)

ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ಸಾಧನೆ
-ಇಂಗ್ಲೆಂಡ್ ಹಾಗೂ ಭಾರತ ತಂಡಗಳಲ್ಲಿ ಜೋ ರೂಟ್ (3 ಪಂದ್ಯಗಳಲ್ಲಿ 263 ರನ್) ಹಾಗೂ ವಿರಾಟ್ ಕೊಹ್ಲಿ (2 ಪಂದ್ಯಗಳಲ್ಲಿ 214 ರನ್) ಅತಿ ಹೆಚ್ಚು ರನ್ ಗಳಿಸಿದ ಆಟಗಾರರು.
- ಬೌಲರ್‌ಗಳ ಪೈಕಿ ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 3 ಪಂದ್ಯಗಳಲ್ಲಿ 14 ವಿಕೆಟ್ ಕಿತ್ತು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರೆ ಟೀಮ್ ಇಂಡಿಯಾ ಪರ ಉಮೇಶ್ ಯಾದವ್ 2 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಭಾರತದ ಪರ ಯಶಸ್ವಿ ಬೌಲರ್ ಎನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications