ಭಾರತ vs ಇಂಗ್ಲೆಂಡ್: ಮೊದಲ ಪಂದ್ಯದ ಸೋಲಿಗೆ ಕಾರಣ ಹೇಳಿದ ಇರ್ಫಾನ್ ಪಠಾಣ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ ಟಿ20 ಸರಣಿ ಆರಂಭವಾಗಿದೆ. ಆದರೆ ಭಾರತಕ್ಕೆ ಈ ಆರಂಭ ನಿಜಕ್ಕೂ ಆಘಾತಕಾರಿಯಾಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ಈ ಟಿ20 ಸರಣಿಯನ್ನು ಎದುರು ನೋಡುತ್ತಿದ್ದ ಅಭಿಮಾನಿಗಳು ಮೊದಲ ಪಂದ್ಯದಲ್ಲಿ ಭಾರತ ಸೋತಿರುವುದರಿಂದ ನಿರಾಶೆಗೊಂಡಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ತಂಡ ತಿರುಗಿಬೀಳುವ ನಿರೀಕ್ಷೆಯೂ ಇದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿರುವುದು ಅಭಿಮಾನಿಗಳಿಗೆ ಮಾತ್ರವಲ್ಲ ಮಾಜಿ ಕ್ರಿಕೆಟಿಗರಿಗೂ ನಿರಾಶೆ ಮೂಡಿಸಿದೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸದ್ಯ ರೋಡ್‌ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಬ್ಯುಸಿಯಾಗಿರುವ ಇರ್ಫಾನ್ ಪಠಾಣ್ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಟೀಮ್ ಇಂಡಿಯಾದ ಸೋಲಿಗೆ ಕಾರಣ ಏನೆಂಬುದನ್ನು ಹಂಚಿಕೊಂಡಿದ್ದಾರೆ.
ಹಾಗಾದರೆ ಇರ್ಫಾನ್ ಪಠಾಣ್ ಹೇಳಿರುವ ಆ ಕಾರಣ ಯಾವುದು? ಭಾರತದ ಸೋಲಿಗೆ ಆ ಅಂಶ ನಿಜಕ್ಕೂ ಕಾರಣವಾಯಿತಾ ಮುಂದೆ ಓದಿ..

"ವೇಗ" ವ್ಯತ್ಯಾಸಕ್ಕೆ ಕಾರಣ
ಟ್ವಿಟ್ಟರ್‌ನಲ್ಲಿ ಇರ್ಫಾನ್ ಪಠಾಣ್ "ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಸೋಲಿಗೆ ಕಾರಣ ಏನಿರಬಹುದು ಎನಿಸುತ್ತದೆ? ನನಗೆ 'ವೇಗ' ಎರಡು ತಂಡಗಳ ನಡುವಿನ ವ್ಯತ್ಯಾಸಕ್ಕೆ ಕಾರಣವಾಯಿತು ಎನಿಸುತ್ತದೆ" ಎಂದು ವಿರಾಟ್ ಕೊಹ್ಲಿ ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಠಾಣ್ ಹೀಗೆ ಹೇಳಲು ಕಾರಣ?
ಇರ್ಫಾನ್ ಪಠಾಣ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಲು ದೃಷ್ಟಿಹರಿಸಬೇಕಾದ ಕಾರಣವಿದೆ. ಇಂಗ್ಲೆಂಡ್ ಕಳೆದ ಪಂದ್ಯದಲ್ಲಿ ಮೂವರು ಪೂರ್ಣಕಾಲಿಕ ವೇಗಿಗಳು ಹಾಗೂ ಇಬ್ಬರು ವೇಗದ ಬೌಲಿಂಗ್ ಮಾಡಬಲ್ಲ ಆಲ್‌ರೌಂಡರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಓರ್ವ ಸ್ಪಿನ್ನರ್ ಮಾತ್ರವೇ ಇಂಗ್ಲೆಂಡ್ ತಂಡದ ಪರವಾಗಿ ದಾಳಿ ನಡೆಸಿದ್ದರು. ಈ ಎಲ್ಲಾ ವೇಗಿಗಳು ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ತಮ್ಮದೇ ಕೊಡುಗೆಯನ್ನು ನೀಡಿದರು. ಇದರಿಂದ ಭಾರತ ತಂಡವನ್ನು ಸುಲಭಕ್ಕೆ ಕಟ್ಟಿಹಾಕಲು ಇಂಗ್ಲೆಂಡ್‌ಗೆ ಸಾಧ್ಯವಾಯಿತು.

ಇಂಗ್ಲೆಂಡ್ ವೇಗಿಗಳ ಸಾಧನೆ
ಇಂಗ್ಲೆಂಡ್ ತಂಡದ ಪರವಾಗಿ ಜೋಫ್ರಾ ಆರ್ಚರ್ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ನೀಡಿ ಭಾರತದ 3 ವಿಕೆಟ್ ಪಡೆದು ಮಿಂಚಿದರು. ಮಾರ್ಕ್ ವುಡ್ 4 ಓವರ್‌ಗಳಲ್ಲಿ 20 ರನ್‌ಗಳಿಗೆ 1 ವಿಕೆಟ್, ಕ್ರಿಸ್ ಜೋರ್ಡಾನ್ 4 ಓವರ್‌ನಲ್ಲಿ 27 ರನ್ ನೀಡಿ 1 ವಿಕೆಟ್ ಮತ್ತು ಬೆನ್ ಸ್ಟೋಕ್ಸ್ 3 ಓವರ್‌ನಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.

ಟೀಮ್ ಇಂಡಿಯಾ ಬೌಲಿಂಗ್ ವಿಭಾಗ
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳತ್ತ ಗಮನ ನೀಡುರುವುದು ಮೇಲ್ನೋಟಕ್ಕೇ ಸಾಬೀತಾಗಿದೆ. ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಯುಜುವೇಂದ್ರ ಚಾಹಲ್ ಜೊತೆಗೆ, ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್ ತಂಡದಲ್ಲಿದ್ದರು. ಈ ಬೌಲರ್‌ಗಳು ಧಾರಾಳವಾಗಿ ರನ್ ಬಿಟ್ಟುಕೊಟ್ಟು ಇಂಗ್ಲೆಂಡ್ ಸುಲಭವಾಗಿ ಗೆಲ್ಲಲು ಕಾರಣವಾಯಿತು. ವೇಗಿಗಳಾಗಿ ಭುವನೇಶ್ವರ್ ಕುಮಾರ್ ಹಾಗೂ ಶಾರ್ದೂಲ್ ಠಾಕೂರ್ ತಂಡದಲ್ಲಿದ್ದರೆ ಹಾರ್ದಿಕ್ ಪಾಂಡ್ಯ ಕೂಡ ಆಲ್‌ರೌಂಡರ್ ಆಗಿ ವೇಗದ ಬೌಲಿಂಗ್ ದಾಳಿಯನ್ನು ನಡೆಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications