
ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 14) ನಡೆದ ಭಾರತ-ಇಂಗ್ಲೆಂಡ್ ದ್ವಿತೀಯ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಭರ್ಜರಿ ಜಯ ಗಳಿಸಿದೆ. ಪಾದಾರ್ಪಣೆ ಪಂದ್ಯವಾಡಿದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕದ ನೆರವಿನೊಂದಿಗೆ ಭಾರತ ಪಂದ್ಯ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್, ಜೇಸನ್ ರಾಯ್ 46, ಡೇವಿಡ್ ಮಲಾನ್ 26, ಜಾನಿ ಬೇರ್ಸ್ಟೋವ್ 20, ನಾಯಕ ಇಯಾನ್ ಮಾರ್ಗನ್ 28, ಬೆನ್ ಸ್ಟೋಕ್ಸ್ 24, ಸ್ಯಾಮ್ ಕರನ್ 6 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 164 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಭಾರತದಿಂದ ಇಶಾನ್ ಕಿಶನ್ 56 (32 ಎಸೆತ), ನಾಯಕ ವಿರಾಟ್ ಕೊಹ್ಲಿ ಅಜೇಯ 73 (49), ರಿಷಭ್ ಪಂತ್ 26, ಶ್ರೇಯಸ್ ಐಯ್ಯರ್ 8 ರನ್‌ನೊಂದಿಗೆ 17.5 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿತು. ಆರಂಭಿಕ ಪಂದ್ಯದಲ್ಲಿ 8 ವಿಕೆಟ್ ಸೋಲು ಕಂಡಿದ್ದ ಭಾರತ ದ್ವಿತೀಯ ಪಂದ್ಯದಲ್ಲಿ ಆಂಗ್ಲರಿಗೆ ತಕ್ಕ ತಿರುಗೇಟು ನೀಡಿದೆ.
ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಭುವನೇಶ್ವರ್ ಕುಮಾರ್ 1, ವಾಷಿಂಗ್ಟನ್ ಸುಂದರ್ 2, ಶಾರ್ದೂಲ್ ಠಾಕೂರ್ 2, ಯುಜುವೇಂದ್ರ ಚಾಹಲ್ 1 ವಿಕೆಟ್ ಪಡೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರನ್ 1, ಕ್ರಿಸ್ ಜೋರ್ಡನ್ 1 ಮತ್ತು ಆದಿಲ್ ರಶೀದ್ 1 ವಿಕೆಟ್ ಪಡೆದರು. ಇಶಾನ್ ಕಿಶಾನ್ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದರು.