3ನೇ ಟೆಸ್ಟ್ ಗೆ ಇಂಗ್ಲೆಂಡ್ ತಂಡದ ಆಯ್ಕೆ ಸವಾಲೆನಿಸಲಿದೆ: ಜೋಸ್ ಬಟ್ಲರ್

ಲಂಡನ್ , ಆಗಸ್ಟ್ 16: ಲಾರ್ಡ್ಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದಿಂದ ಹೊರಗಿದ್ದ ಬೆನ್ ಸ್ಟೋಕ್ಸ್ ಮರಳಿದ್ದಾರೆ. ದ್ವಿತೀಯ ಟೆಸ್ಟ್ ನಲ್ಲಿ ಶತಕ ಬಾರಿಸಿದ ಕ್ರಿಸ್ ವೋಕ್ಸ್ ತಂಡದಲ್ಲಿ ಗಟ್ಟಿಯಾಗಿದ್ದಾರೆ. ಹೀಗಾಗಿ ಮುಂಬರಲಿರುವ ಭಾರತದೆದುರಿನ ಮೂರನೇ ಟೆಸ್ಟ್ ಗೆ ಇಂಗ್ಲೆಂಡ್ ತಂಡಕ್ಕೆ ಆಟಗಾರರ ಆಯ್ಕೆ ಸವಾಲೆನಿಸಲಿದೆ ಎಂದು ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಹೇಳಿದ್ದಾರೆ.
'ಟ್ರೆಂಟ್ ಬ್ರಿಡ್ಜ್ ನಲ್ಲಿನ ಮೂರನೇ ಟೆಸ್ಟ್ ಗೆ ಆಟಗಾರರ ಆಯ್ಕೆ ಪೈಟೋಟಿಯಿಂದ ಕೂಡಿದ್ದು, ಆಯ್ಕೆ ಸಮಿತಿಗೆ ಇದೊಂದು ರೀತಿಯಲ್ಲಿ ಸವಾಲಿನಿಸಲಿದೆ. ಸ್ಯಾಮ್ ಕರನ್ ಮತ್ತು ಕ್ರಿಸ್ ವೋಕ್ಸ್ ಇಬ್ಬರೂ ಕಳೆದೆರಡು ಟೆಸ್ಟ್ ಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದವರು. ಇತ್ತ ಬೆನ್ ಸ್ಟೋಕ್ಸ್ ಕೂಡ ತಂಡಕ್ಕೆ ಮರಳಿದ್ದಾರೆ. ಆದ್ದರಿಂದ ಆಟಗಾರರ ಆಯ್ಕೆ ಕಷ್ಟವೆನಿಸಿದೆ' ಎಂದು ಬಟ್ಲರ್ ಹೇಳಿದರು.
ಬರ್ಮಿಂಗ್ ಹ್ಯಾಮ್ ಮತ್ತು ಲಂಡನ್ ಟೆಸ್ಟ್ ಗಳಲ್ಲಿ ಇಂಗ್ಲೆಂಡ್ ಭಾರತದೆದುರು 2-0ಯಿಂದ ಸರಣಿ ಮುನ್ನಡೆಯಲ್ಲಿದೆ. ಬ್ರಿಸ್ಟಲ್ ನೈಟ್ ಕ್ಲಬ್ ನ ಹೊಡೆದಾಟದಲ್ಲಿ ಪಾಲ್ಗೊಂಡ ಆರೋಪ ಎದುರಿಸಿದ್ದ ಸ್ಟೋಕ್ಸ್ ಅವರನ್ನು ಬ್ರಿಸ್ಟಲ್ ಕ್ರೌನ್ ಕೋರ್ಟ್ ನಿರಪರಾಧಿಯಿದೆಂದು ತೀರ್ಪಿತ್ತಿದ್ದರಿಂದ ಸ್ಟೋಕ್ಸ್ ಕೂಡ ಇಂಗ್ಲೆಂಡ್ ತಂಡಕ್ಕೆ ಮರಳಿ ಸೇರಿಕೊಂಡಿದ್ದಾರೆ.
'ಸ್ಟೋಕ್ಸ್ ಬಹುತೇಕ ಪ್ರಮುಖ ಪಂದ್ಯಗಳಲ್ಲಿ ತಂಡದೊಂದಿಗೆ ಕಾಣಿಸಿಕೊಂಡವರು. ದ್ವಿತೀಯ ಟೆಸ್ಟ್ ನಲ್ಲಿ ಕಾರಣಾಂತರ ತಂಡದಿಂದ ಹೊರಗಿದ್ದ ಅವರು ತಂಡಕ್ಕೆ ವಾಪಸ್ಸಾಗಿದ್ದಾರೆ. ತಂಡದ ತರಬೇತಿಯಲ್ಲಿ ಸ್ಟೋಕ್ಸ್ ಪಾಲ್ಗೊಳ್ಳುವುದನ್ನು ಎದುರು ನೋಡುತ್ತಿದ್ದೇನೆ. ಆದರೆ ಉಳಿದ ಆಟಗಾರರ ಆಯ್ಕೆ ಹೇಗೋ ಹೇಳಲಾಗುತ್ತಿಲ್ಲ' ಎಂದು ಬಟ್ಲರ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications