For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬೂಮ್ರಾ

India vs England: Jasprit Bumrah breaks Kapil Devs record in Test Cricket

ಲಂಡನ್: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಬೂಮ್ರಾ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ ಪಡೆದ ಭಾರತೀಯ ವೇಗಿಗಳಲ್ಲಿ ಸದ್ಯ ಬೂಮ್ರಾ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ ವೇಳೆ ಜಸ್‌ಪ್ರೀತ್‌ ಬೂಮ್ರಾ ದಾಖಲೆ ನಿರ್ಮಿಸಿದ್ದಾರೆ. ಐದನೇ ದಿನದಾಟದ ವೇಳೆ ಬೂಮ್ರಾ 2 ವಿಕೆಟ್‌ ಉರುಳಿಸಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆಂಗ್ಲ ಬ್ಯಾಟ್ಸ್‌ಮನ್‌ಗಳಾದ ಆಲಿ ಪೋಪ್ ಮತ್ತು ಜಾನಿ ಬೇರ್ಸ್ಟೋವ್ ವಿಕೆಟ್ ಮುರಿಯುವುದರೊಂದಿಗೆ ಬೂಮ್ರ ದಂತಕತೆ ಕಪಿಲ್ ದೇವ್ ದಾಖಲೆ ಸರಿಗಟ್ಟಿದ್ದಾರೆ.

ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49715
ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬೂಮ್ರಾ

ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬೂಮ್ರಾ

ಸೋಮವಾರ (ಸೆಪ್ಟೆಂಬರ್‌ 6) ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಆಲಿ ಪೋಪ್ ಅವರನ್ನು 2 ರನ್‌ಗೆ ಮತ್ತು ಅನುಭವಿ ಜಾನಿ ಬೇರ್ಸ್ಟೋವ್ ಅವರನ್ನು 0 ರನ್‌ಗೆ ಔಟ್ ಮಾಡಿದರು. ಇದರೊಂದಿಗೆ ಜೂಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ವೇಗಿಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ, ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್ ಕಪಿಲ್ ದೇವ್ ಹೆಸರಿನಲ್ಲಿ ಈ ದಾಖಲೆಯಿತ್ತು. ಕಪಿಲ್ ದೇವ್ ಅವರು 25 ಟೆಸ್ಟ್‌ ಪಂದ್ಯಗಳಲ್ಲಿ 100 ವಿಕೆಟ್‌ ಉರುಳಿಸಿದ್ದರು. ಆದರೆ ಬೂಮ್ರಾ 24 ಟೆಸ್ಟ್‌ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದಲ್ಲಿ 100 ವಿಕೆಟ್‌ ಪಡೆದವರ ಪಟ್ಟಿ

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದಲ್ಲಿ 100 ವಿಕೆಟ್‌ ಪಡೆದವರ ಪಟ್ಟಿ

ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ವೇಗಿಗಳಲ್ಲಿ ಈಗ ಮೂರನೇ ಸ್ಥಾನದಲ್ಲಿದ್ದಾರೆ. 28 ಟೆಸ್ಟ್‌ ಪಂದ್ಯಗಳಲ್ಲಿ ಪಠಾಣ್ 100 ವಿಕೆಟ್‌ ಸಾಧನೆ ಮಾಡಿದ್ದರು. ಇದೇ ದಾಖಲೆ ಪಟ್ಟಿಯಲ್ಲಿ ವೇಗಿ ಮೊಹಮ್ಮದ್ ಶಮಿ 4ನೇ ಸ್ಥಾನದಲ್ಲಿದ್ದಾರೆ. ಶಮಿ 28+ ಪಂದ್ಯಗಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ 100 ವಿಕೆಟ್‌ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಜಡೇಜಾ ಕೇವಲ 18 ಟೆಸ್ಟ್‌ ಪಂದ್ಯಗಳಲ್ಲಿ 100 ವಿಕೆಟ್ ಉರುಳಿಸಿದ್ದರು. 2013ರಲ್ಲಿ ವೆಸ್ಟ್‌ ಇಂಡೀಸ್‌ಗೆ ಭಾರತ ಪ್ರವಾಸ ಹೋಗಿದ್ದಾಗ ಜಡೇಜಾ ಈ ಸಾಧನೆ ಮಾಡಿದ್ದರು. ಆದರೆ ವೇಗಿಗಳ ದಾಖಲೆಯಲ್ಲಿ ಬೂಮ್ರಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ಟೆಸ್ಟ್‌ನಲ್ಲಿ ವೇಗದಲ್ಲಿ 100 ವಿಕೆಟ್‌ ಪಡೆದ ಭಾರತೀಯ ವೇಗಿಗಳ ಪಟ್ಟಿ
* ಜಸ್‌ಪ್ರೀತ್‌ ಬೂಮ್ರಾ, 24 ಟೆಸ್ಟ್‌ ಪಮದ್ಯಗಳು
* ಕಪಿಲ್ ದೇವ್, 25 ಟೆಸ್ಟ್ ಪಂದ್ಯಗಳು
* ಇರ್ಫಾನ್ ಪಠಾಣ್, 28 ಟೆಸ್ಟ್‌ ಪಂದ್ಯಗಳು
* ಮೊಹಮ್ಮದ್ ಶಮಿ, 28+ ಟೆಸ್ಟ್‌ ಪಂದ್ಯಗಳು

ಭಾರತ ಮತ್ತು ಇಂಗ್ಲೆಂಡ್ ಸಂಕ್ಷಿಪ್ತ ಸ್ಕೋರ್‌

ಭಾರತ ಮತ್ತು ಇಂಗ್ಲೆಂಡ್ ಸಂಕ್ಷಿಪ್ತ ಸ್ಕೋರ್‌

ಭಾರತ ಮೊದಲ ಇನ್ನಿಂಗ್ಸ್: ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 11, ಕೆಎಲ್ ರಾಹುಲ್ 17, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್ 57, ಉಮೇಶ್ ಯಾದವ್ 10, ಮೊಹಮ್ಮದ್ ಸಿರಾಜ್ 1 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಜೋ ರೂಟ್ 21, ಆಲಿ ಪೋಪ್ 81, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು.
ಭಾರತದ ದ್ವಿತೀಯ ಇನ್ನಿಂಗ್ಸ್: ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ನೀಡಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ರಿಷಭ್ ಪಂತ್ 50, ಶಾರ್ದೂಲ್ ಠಾಕೂರ್ 60, ಉಮೇಶ್ ಯಾದವ್ 25 ರನ್‌ನೊಂದಿಗೆ 148.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 466 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಲಾಗಿತ್ತು.
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌: ದ್ವಿತೀಯ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್ ಈಗಾಗಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದೆ. 84.1ನೇ ಓವರ್‌ನಲ್ಲಿ ಟೀ ಬ್ರೇಕ್ ಕೊಡುವಾಗ ಇಂಗ್ಲೆಂಡ್ 193 ರನ್‌ಗೆ 8 ವಿಕೆಟ್ ಕಳೆದುಕೊಂಡಿತ್ತು. ಗೆಲ್ಲಲು ಇನ್ನೂ 175 ಬೇಕಿತ್ತು. ಬ್ಯಾಟ್ಸ್‌ಮನ್‌ಗಳು ಎಲ್ಲಾ ಔಟ್ ಆಗಿದ್ದರಿಂದ ಭಾರತ ಗೆಲ್ಲುವ ನಿರೀಕ್ಷೆಯಲ್ಲಿತ್ತು.

Story first published: Tuesday, September 7, 2021, 10:04 [IST]
Other articles published on Sep 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+