Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ vs ಭಾರತ: ಭಾರತದಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರ

India vs England: Jasprit Bumrah plays his maiden Test on home soil

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. 17 ಪಂದ್ಯಗಳನ್ನು ವಿದೇಶದಲ್ಲಿ ಆಡಿದ ಬಳಿಕ ತವರಿನಲ್ಲಿ ಮೊದಲ ಬಾರಿಗೆ ಈ ಅವಕಾಶವನ್ನು ಪಡೆದಿದ್ದಾರೆ ಬೂಮ್ರ. ಈ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಮೊದಲ ವಿಕೆಟ್ ಕಿತ್ತು ತಂಡಕ್ಕೆ ಮೇಲುಗೈ ಒದಗಿಸಿದರು.

ಇಂಗ್ಲೆಂಡ್ ತಂಡ 63 ನ್ ಗಳಿಸಿದ ವೇಳೆ ಆರಂಭಿಕ ಆಟಗಾರ ರೋರಿ ಬರ್ನ್ಸ್ ವಿಕೆಟ್ ಕಳೆದುಕೊಂಡಿತು. ಅಶ್ವಿನ್ ಎಸೆತ ಎಸೆತದಲ್ಲಿ ಬರ್ನ್ಸ್ ವಿಕೆಟ್‌ ಕೀಪರ್ ರಿಷಭ್ ಪಂತ್‌ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಾದ ಬಳಿಕ ಕ್ರೀಸ್‌ಗೆ ಇಳಿದ ಲಾರೆನ್ಸ್‌ಗೆ ಖಾತೆ ತೆರೆಯುವ ಮುನ್ನವೇ ಬೂಮ್ರಾ ಫೆವಿಲಿಯನ್ ಹಾದಿ ತೋರಿಸಿದರು.

ಉತ್ತಮ ಲೆನ್ತ್‌ನಿಂದ ಬಂದ ಬೂಮ್ರ ಎಸೆದ ಅದ್ಭುತ ಎಸೆತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಲಾರೆನ್ಸ್ ವಿಫಲರಾಗಿ ಎಲ್‌ಬಿ ಬಲೆಗೆ ಬಿದ್ದರು. ನೇರವಾಗಿ ಮಧ್ಯದ ವಿಕೆಟ್‌ನ ಹಾದಿಯಲ್ಲಿದ್ದ ಈ ಎಸೆತವನ್ನು ಅಂಪಾಯರ್ ಸ್ವಲ್ಪವೂ ಅನುಮಾನಿಸದೆ ತೀರ್ಪಿತ್ತರು. ಲಾರೆನ್ಸ್ ಕೂಡ ಈ ತೀರ್ಪನ್ನು ಒಪ್ಪಿ ಫೆವಿಲಿಯನ್‌ಗೆ ಹೆಜ್ಜೆ ಹಾಕಿದರು.

ಇದು ಜಸ್ಪ್ರೀತ್ ಬೂಮ್ರ ಅವರ 80ನೇ ವಿಕೆಟ್ ಆಗಿದೆ. ಈ ಮೊದಲ 79 ವಿಕೆಟ್‌ಗಳು 17 ಪಂದ್ಯಗಳಿಂದ ವಿದೇಶಿ ನೆಲದಲ್ಲಿ ಬಂದಿದೆ. ಈ ಮೂಲಕ ಭಾರತೀಯ ಬೌಲರ್‌ಗಳ ಪೈಕಿ ವಿದೇಶದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬಳಿಕ ಭಾರತದಲ್ಲಿ ಚೊಚ್ಚಲ ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ ಜಸ್ಪ್ರೀತ್ ಬೂಮ್ರ.

ಇಂಗ್ಲೆಂಡ್ ತನ್ನ ಮೊದಲ ಎರಡು ವಿಕೆಟ್ ಕಳೆದುಕೊಂಡ ಬಳಿಕ ಅದ್ಭುತವಾದ ಜೊತೆಯಾಟವನ್ನು ಪ್ರದರ್ಶಿಸಿದರೆ. ನಾಯಕ ಜೋ ರೂಟ್ ಹಾಗೂ ಡಾಮಿನಿಕ್ ಸಿಬ್ಲಿ ಇಬ್ಬರೂ ತಲಾ ಅರ್ಧ ಶತಕವನ್ನು ದಾಖಲಿಸಿ ಮುನ್ನಗ್ಗುತ್ತಿದ್ದು ಶತಕದ ಜೊತೆಉಆಟವನ್ನು ನೀಡಿದ್ದಾರೆ.

Story first published: Friday, February 5, 2021, 15:35 [IST]
Other articles published on Feb 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+