ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಿಗೆ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫರೀ

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಎರಡು ಟೆಸ್ಟ್ ಪಂದ್ಯಗಳಿಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಲ್ (ಐಸಿಸಿ) ಅಂಪೈರ್‌ಗಳನ್ನು ಹೆಸರಿಸಿದೆ. ಎರಡೂ ಪಂದ್ಯಗಳಿಗೂ ಭಾರತದಿಂದ ಆಯ್ಕೆಯಾಗಿರುವ ಏಕಮಾತ್ರ ಎಲೈಟ್ ಪ್ಯಾನೆಲ್ ಅಂಪೈರ್ ನಿತಿನ್ ಮೆನನ್ ಆನ್ ಫೀಲ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
'ಟೆಸ್ಟ್‌ನಲ್ಲೂ ಇಂಟರ್ ನ್ಯಾಷನಲ್ ಪ್ಯಾನೆಲ್ ಅಂಪೈರ್‌ಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಎಲೈಟ್ ಪ್ಯಾನೆಲ್‌ಗೆ ಇತ್ತೀಚಿಗೆ ಆಯ್ಕೆಯಾಗಿರುವ-ಜೋಯಲ್ ವಿಲ್ಸನ್, ಮೈಕೆಲ್ ಗೌಫ್ ಮತ್ತು ನಿತಿನ್ ಮೆನನ್-ಎಲ್ಲರೂ ಎಲೈಟ್ ಪ್ಯಾನೆಲ್‌ಗೆ ಸೇರುವ ಮೊದಲು ಟೆಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಭಾರತವು ಪ್ರಸ್ತುತ ಅಂತಾರಾಷ್ಟ್ರೀಯ ಸಮಿತಿಯಲ್ಲಿ ನಾಲ್ಕು ಸ್ಥಾನಗಳನ್ನು ಹೊಂದಿದೆ,' ಎಂದು ಐಸಿಸಿ ಹೇಳಿದೆ.
ಅಂತಾರಾಷ್ಟ್ರೀಯ ಪ್ಯಾನೆಲ್ ಅಂಪೈರ್‌ಗಳಾಗಿರುವ ಅನಿಲ್ ಚೌಧರಿ ಮತ್ತು ವೀರೇಂದರ್ ಶರ್ಮಾ ಅವರಿಗೆ ಪಾದಾರ್ಪಣೆ ಮಾಡಲು ಐಸಿಸಿ ಆಹ್ವಾನ ನೀಡಿದೆ. ಚೌಧರಿ ಮೊದಲ ಟೆಸ್ಟ್‌ನಲ್ಲಿ ಜವಾಬ್ದಾರಿ ನಿರ್ವಹಿಸಿದರೆ, ಶರ್ಮಾ ಅವರು ಮೆನನ್ ಅವರ ಜೊತೆಗೆ ದ್ವಿತೀಯ ಟೆಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮೊದಲನೇ ಟೆಸ್ಟ್‌ನಲ್ಲಿ ಸಿ ಸಂಶುದ್ದೀನ್ ಅವರು ಥರ್ಡ್ ಅಂಪೈರ್ ಆಗಿರಲಿದ್ದಾರೆ. ದ್ವಿತೀಯ ಟೆಸ್ಟ್‌ನಲ್ಲಿ ಅನಿಲ್ ಚೌಧರಿ ಥರ್ಡ್ ಅಂಪೈರ್ ಆಗಿರಲಿದ್ದಾರೆ. ಫೆಬ್ರವರಿ 5ರಿಂದ 9ರ ವರೆಗೆ ಮತ್ತು ಫೆಬ್ರವರಿ 13ರಿಂದ 17ರ ವರೆಗೆ ನಡೆಯಲಿರುವ ಎರಡೂ ಟೆಸ್ಟ್ ಪಂದ್ಯಗಳಿಗೂ ಕನ್ನಡಿಗ ಜಾಗವಲ್ ಶ್ರೀನಾಥ್ ಮ್ಯಾಚ್ ರೆಫರೀ ಆಗಿರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications