
ಚೆನ್ನೈ: ಶ್ರೀಲಂಕಾ ಪ್ರವಾಸದ ಬಳಿಕವೂ ಅದ್ಭುತ ಫಾರ್ಮ್‌ನಲ್ಲೇ ಮುಂದುವರೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಭಾರತ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದಾರೆ. ಚೆನ್ನೈಯ ಎಂಎ ಸಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೂಟ್ ಸೊಗಸಾಗ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಜೋ ರೂಟ್ ಶನಿವಾರ (ಫೆಬ್ರವರಿ 6) ದ್ವಿತೀಯ ದಿನದಾಟದಲ್ಲಿ 147 ಓವರ್ ಮುಕ್ತಾಯದ ವೇಳೆ 209 ರನ್ ಬಾರಿಸಿ ಆಡುತ್ತಿದ್ದರು. ಈ ಪಂದ್ಯದಲ್ಲಿ ತನ್ನ ವೃತ್ತಿ ಬದುಕಿನ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರೂಟ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಭಾರತ vs ಇಂಗ್ಲೆಂಡ್, 1ನೇ ಟೆಸ್ಟ್, Live ಸ್ಕೋರ್‌ಕಾರ್ಡ್
147 ಓವರ್‌ಗೆ ಇಂಗ್ಲೆಂಡ್ 4 ವಿಕೆಟ್ ಕಳೆದು 454 ರನ್ ಬಾರಿಸಿತ್ತು. ರೋರಿ ಬರ್ನ್ಸ್ 33, ಡೊಮಿನಿಕ್ ಸಿಬ್ಲಿ 87, ಬೆನ್ ಸ್ಟೋಕ್ಸ್ 82 ರನ್ ಬಾರಿಸಿ ನಿರ್ಗಮಿಸಿದ್ದರು. ಜೋ ರೂಟ್ 209 ಮತ್ತು ಆಲ್ಲಿ ಪೋಪ್ 24 ರನ್ ಬಾರಿಸಿ ಆಡುತ್ತಿದ್ದರು. ಜಸ್‌ಪ್ರೀತ್ ಬೂಮ್ರಾ 2, ಶಹಬಾಝ್ ಜನದೀಮ್ ಮತ್ತು ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದರು.
100 ಟೆಸ್ಟ್ ಪಂದ್ಯಗಳನ್ನಾಡುತ್ತಿರುವ ರೂಟ್ ಬಾರಿಸುತ್ತಿರುವ 5ನೇ ದ್ವಿಶತಕವಿದು. ಟೆಸ್ಟ್‌ನಲ್ಲಿ ರೂಟ್ 8458* ರನ್ ಬಾರಿಸಿದ್ದಾರೆ. 19 ಶತಕ, 49 ಅರ್ಧ ಶತಕ ಬಾರಿಸಿದ್ದಾರೆ. ಇನ್ನು 148 ಏಕದಿನ ಪಂದ್ಯಗಳಲ್ಲಿ 5962 ರನ್, 16 ಶತಕ, 32 ಟಿ20ಐ ಪಂದ್ಯಗಳಲ್ಲಿ 893 ರನ್ ಬಾರಿಸಿದ್ದಾರೆ.