For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 100ನೇ ಟೆಸ್ಟ್ ಆಡಿದ ಇಂಗ್ಲೆಂಡ್‌ನ 15ನೇ ಆಟಗಾರ ಎನಿಸಿದ ಜೋ ರೂಟ್

India vs England: Joe Root playing 100 Tests match

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ನಾಯಕ ಜೋ ರೂಟ್‌ಗೆ ಇದು 100ನೇ ಪಂದ್ಯವಾಗಿದ್ದು ಈ ಮೂಲಕ ಇಂಗ್ಲೆಂಡ್ ತಂಡದ ಪರವಾಗಿ ಈ ಸಾಧನೆ ಮಾಡಿದ 15ಬೇ ಆಟಗಾರ ಎನಿಸಿದ್ದಾರೆ ಜೋ ರೂಟ್.

ಕುತೂಹಲಕಾರಿ ಸಂಗತಿಯೆಂದರೆ ಜೋ ರೂಟ್ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದ ಪದಾರ್ಪಣೆಯನ್ನು ಕೂಡ ಭಾರತದ ವಿರುದ್ಧವೇ ಮಾಡಿದ್ದರು. 2012ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಜೋ ರೂಟ್ ಮೊದಲ ಬಾರಿಗೆ ಇಂಗ್ಲೆಂಡ್ ತಂಡದ ಪರವಾಗಿ ಬಿಳಿ ಜರ್ಸಿ ತೊಟ್ಟಿದ್ದರು.

ಜೋ ರೂಟ್ ಕಳೆದ 99 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡಿದ್ದಾರೆ. 49.39ರ ಸರಾಸರಿಯಲ್ಲಿ ಜೋ ರೂಟ್ 8249 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 49 ಅರ್ಧ ಶತಕಗಳನ್ನು ಸಿಡಿಸಿದ್ದಾರೆ ಇಂಗ್ಲೆಂಡ್ ನಾಯಕ ಜೋ ರೂಟ್.

ಇನ್ನು ಇಂಗ್ಲೆಂಡ್ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಜೋ ರೂಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಅಲೆಸ್ಟರ್ ಕುಕ್ (12472 ರನ್), ಗ್ರಹಾಂ ಗೂಚ್ (8900 ರನ್) ಅಲೆಕ್ ಸ್ಟೆವರ್ಟ್(8463 ರನ್) ಗಿಂತ ಮಾತ್ರವೇ ಹಿಂದಿದ್ದಾರೆ. ಇಂಗ್ಲೆಂಡ್ ತಮಡದ ಪರವಾಗಿ ಟಾಪ್ 10 ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಅತಿ ಕಡಿಮೆ ಪಂದ್ಯಗಳನ್ನು ಆಡಿದ ಆಟಗಾರ ಜೋ ರೂಟ್ ಆಗಿದ್ದಾರೆ.

2017ರಲ್ಲಿ ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅಲ್ಲಿಂದ ರೂಟ್ 46 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು 25 ಗೆಲುವು ಹಾಗೂ 15 ಸೋಲು ಕಂಡಿದ್ದಾರೆ. 6 ಪಂದ್ಯಗಳು ಡ್ರಾ ಫಲಿತಾಂಶ ಕಂಡಿದೆ. 40 ಟೆಸ್ಟ್‌ಗಳಿಗಿಂತ ಅಧಿಕ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ನಾಯಕರ ಪೈಕಿ ಅತಿ ಹೆಚ್ಚು ಗೆಲುವಿನ ಸರಾಸರಿ ಹೊಂದಿದ ನಾಯಕ (54.34) ಎನಿಸಿದ್ದಾರೆ.

Story first published: Friday, February 5, 2021, 11:34 [IST]
Other articles published on Feb 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+