For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಶೂನ್ಯ ಸುತ್ತಿ ಮತ್ತೆ ನಿರಾಸೆ ಮೂಡಿಸಿದ ಕೆಎಲ್ ರಾಹುಲ್

India Vs England: KL Rahul another bad show against England

ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ವೃತ್ತಿ ಜೀವನದ ಕಠಿಣ ಸಂದರ್ಭವನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಕೆಎಲ್ ರಾಹುಲ್ ವಿಫಲರಾಗಿದ್ದು ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಮಿಂಚಿದ್ದ ಕಾರಣ ರೋಹಿತ್ ಶರ್ಮಾ ಮತ್ತೆ ತಂಡಕ್ಕೆ ಮರಳುವ ಕಾರಣ ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅವಕಾಶ ಪಡೆಯುವ ಸಾಧ್ಯತೆಯಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮ್ಯಾನೇಜ್‌ಮೆಂಟ್ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತು ಆಡುವ ಬಳಗದಲ್ಲಿ ಮುಂದುವರಿಸಲು ನಿರ್ಧರಿಸಿತ್ತು. ಆದರೆ ದುರದೃಷ್ಟವಶಾತ್ ರಾಹುಲ್ ಮತ್ತೊಮ್ಮೆ ವಿಫಲರಾಗಿ ಫೆವಿಲಿಯನ್ ಸೇರಿಕೊಂಡಿದ್ದಾರೆ.

ಈ ಮೂಲಕ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಆಡಿದ ಕೆಎಲ್ ರಾಹುಲ್ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಒಂದು ರನ್ ಮಾತ್ರವೇ ಗಳಿಸಿದ್ದಾರೆ. ಈ ಮೂಲಕ ಫಾರ್ಮ್ ಕೊರತೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ.

ಕೆಎಲ್ ರಾಹುಲ್ ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ಒಟ್ಟು ರನ್ ಕೇವಲ 1 ರನ್ ಮಾತ್ರ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲೂ ಕೆಎಲ್ ರಾಹುಲ್ ಶೂನ್ಯ ಸುತ್ತಿ ಫೆವಿಲಿಯನ್ ಸೇರಿದ್ದರು.

ಕೆಎಲ್ ರಾಹುಲ್ ಆಡಿದ ಕೊನೆಯ ನಾಲ್ಕು T20ಇನ್ನಿಂಗ್ಸ್‌ಗಳ ಪ್ರದರ್ಶನ
0 (2) vs ಆಸ್ಟ್ರೇಲಿಯಾ
1 (4) vs ಇಂಗ್ಲೆಂಡ್
0 (6) vs ಇಂಗ್ಲೆಂಡ್
0 (4) vs ಇಂಗ್ಲೆಂಡ್

Story first published: Tuesday, March 16, 2021, 19:44 [IST]
Other articles published on Mar 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+