
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧಧ ಟಿ20 ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಅವಕಾಶವನ್ನು ಪಡೆದು ಕಳಪೆ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಈಗ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್ ಅರ್ಧ ಶತಕವನ್ನು ಸಿಡಿಸುವ ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
"ಬ್ಯಾಟ್ಸ್‌ಮನ್ ಆಗಿ ನಾನು ಯಾವಾಗಲೂ ಅಂಗಳದ ಮಧ್ಯದಲ್ಲಿರಲು ಬಯಸುತ್ತೇನೆ ಮತ್ತು ನಿರಂತರವಾಗಿ ಆಡುತ್ತಾ ಇರುವುದು ನನ್ನನ್ನು ಉತ್ತಮ ಲಯದಲ್ಲಿರುವಂತೆ ಮಾಡುತ್ತದೆ" ಎಂದು ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಬಯಸಿದಷ್ಟು ಆಡಲು ನನಗೆ ಅವಕಾಶಗಳು ದೊರೆಯಲಿಲ್ಲ. ಆದರೆ ನಾನು ಆಡಲಿಲ್ಲ ಎಂದು ಮನಸಿನಲ್ಲಿ ಹೇಳುತ್ತಿಲ್ಲ. ಆದರೆ ನೀವು ಅತ್ಯುತ್ತಮವಾಗಿರುವುದನ್ನು ಸಿದ್ದಪಡಿಸಲು ಬೇಕಾದ ಸಿದ್ದತೆಗಳನ್ನು ನಡೆಬೇಕು. ಅದು ತರಬೇತಿಯಲ್ಲಿ ಆಗಿರಬಹುದು ಅಥವಾ ನೆಟ್‌ನಲ್ಲಿ ಆಗಿರಬಹುದು" ಎಂದಿದ್ದಾರೆ ಕೆಎಲ್ ರಾಹುಲ್.
"ಅದೇ ರೀತಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ, ಆದರೆ ಈಗಾಗಲೇ ಹೇಳಿದಂತೆ ಆಟದ ಸಂದರ್ಭದಲ್ಲಿ ಕೈಗೂಡಿರಲಿಲ್ಲ. ಇದೆಲ್ಲವೂ ಪ್ರಯಾಣದ ಭಾಗಗಳು. ನಾನೇನೂ ವಿಶೇಷವಾಗಿದ್ದನ್ನು ಮಾಡಿರಲಿಲ್ಲ. ಹೆಚ್ಚಿನದಾಗಿ ನಾನು ಒತ್ತಡಕ್ಕೂ ಒಳಗಾಗಲಿಲ್ಲ. ಆದರೆ ಆಟಗಾರನಾಗಿ ಕೆಲ ಕಾಲ ಬೆಂಚ್ ಕಾದಿದ್ದರಿಂದ ನಿರಾಶನಾಗಿರಬಹುದು " ಎಂದು ರಾಹುಲ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಆ ಮೂರ್ನಾಲ್ಕು ತಿಂಗಳ ನಂತರ ಅವಕಾಶ ಪಡೆದು ಪ್ರತಿ ಆಟಗಾರನಂತೆಯೇ ಉತ್ತಮ ಪ್ರದರ್ಶನ ನೀಡಬೇಕೆಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗದಿದ್ದಾಗ ಅದನ್ನು ನೀವು ಒಪ್ಪಿಕೊಳ್ಳಬೇಕು. ನಾನು ಉತ್ತಮವಾಗಿ ಸಿದ್ಧತೆಯನ್ನು ನಡೆಸಿದ್ದೇನೆಯೇ? ತರಬೇತಿಯನ್ನು ಕಠಿಣವಾಗಿ ಪಡೆದಿದ್ದೇನೆಯೇ? ಸಿದ್ಧತೆಯಲ್ಲಿ ಅಗತ್ಯವಿರುವುದನ್ನು ಯಾವುದಾದರೂ ನಾನು ಬಿಟ್ಟಿದ್ದೇನೆಯೇ? ಎಂದು ನನ್ನಲ್ಲಿಯೇ ಪ್ರಶ್ನೆಯನ್ನು ಮಾಡಿದ್ದೆ. ಇಷ್ಟಲ್ಲಾ ಮಾಡಿಯೂ ರನ್‌ಗಳಿಸದಿದ್ದಾಗ ಅದನ್ನು ಸ್ವೀಕರಿಸಲು ಸಾಧ್ಯವಿದೆ" ಎಂದು ರಾಹುಲ್ ಪ್ರತಿಕ್ರಿಯಿಸಿದರು.