ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಜಾಗಕ್ಕೆ ಕೆಎಲ್ ರಾಹುಲ್ ಆಯ್ಕೆ

ಲಂಡನ್: ಭಾರತ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿವೆ. ಹೀಗಾಗಿ ಮುಂಬರಲಿರುವ ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಸಮಸ್ಯೆಯಾಗಲಿದೆಯಾ ಅನ್ನುವ ಭೀತಿ ಶುರುವಾಗಿದೆ. ಈ ಕಾರಣದಿಂದಾಗಿ ಮುಂದಿನ ಅಭ್ಯಾಸ ಪಂದ್ಯದಲ್ಲೂ ಬದಲಾವಣೆ ಕಾಣಸಿಗುವ ಸಾಧ್ಯತೆಯಿದೆ.
ಭಾರತ ತಂಡದಲ್ಲೀಗ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್, ಅನುಭವಿ ವೃದ್ಧಿಮಾನ್ ಸಾಹ, ಟ್ರೇನರ್ ದಯಾನಂದ ಗರಣಿ ಸೇರಿದಂತೆ ಇನ್ನೂ ಮೂವರು ಐಸೊಲೇಶನ್‌ನಲ್ಲಿದ್ದಾರೆ. ಹೀಗಾಗಿ ಮುಂದೆ ಭಾರತ Xi ಮತ್ತು ಕೌಂಟಿ ಸೆಲೆಕ್ಟ್ XI ನಡುವಿನ ಅಭ್ಯಾಸ ಪಂದ್ಯದಲ್ಲಿ ಪಂತ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ಆಡುವ ನಿರೀಕ್ಷೆ ಇದೆ. ಅಭ್ಯಾಸ ಪಂದ್ಯ ಜುಲೈ 20-22ರ ವರೆಗೆ ನಡೆಯಲಿದೆ.
29ರ ಹರೆಯದ ಕೆಎಲ್ ರಾಹುಲ್ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ್ದೇ ಕೊನೆ, ಆ ಬಳಿಕ ಟೆಸ್ಟ್ ಪಂದ್ಯ ಆಡಿಲ್ಲ. ಆದ್ದರಿಂದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರಾಹುಲ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗ ಕೆಎಲ್ ರಾಹುಲ್‌ಗೆ ಭಾರತ ಪರ ಆಡಲು ಅಭ್ಯಾಸ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ.
ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಗಾಯಕ್ಕೀಡಾಗಿರುವುದರಿಂದ ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಆಡಲಿದ್ದಾರೆ. ಅಂದ್ಹಾಗೆ ಸೋಂಕಿಗೀಡಾಗಿದ್ದ ಪಂತ್ ಶೀಘ್ರ ಚೇತರಿಸಿ ಕ್ವಾರಂಟೈನ್ ಮುಗಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications