Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಇಂಗ್ಲೆಂಡ್: ಕಠಿಣ ಅಭ್ಯಾಸದಲ್ಲಿ ಭಾಗಿಯಾದ ಟೀಮ್ ಇಂಡಿಯಾ

India vs England: Kohli and team centre-wicket training session ahead of the 5-Test series.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಟೀಮ್ ಇಂಡಿಯಾದ ಆಟಗಾರರು ಈ ಸಂದರ್ಭದಲ್ಲಿ ಕಠಿಣ ಅಭ್ಯಾಸವನ್ನು ಆರಂಭಿಸಿದ್ದಾರೆ. ಡರ್ಹಾಮ್‌ನಲ್ಲಿ ಸೆಂಟರ್ ಪಿಚ್‌ನಲ್ಲಿ ಮಂಗಳವಾರ ಆಟಗಾರರು ತಾಲೀಮು ನಡೆಸಿದರು.

ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್, ಅಜಿಂಕ್ಯಾ ರಹಾನೆ ಸೆಂಟರ್ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸಿದರು. ಕೊರೊನಾವೈರಸ್‌ಗೆ ತುತ್ತಾಗಿ ಚೇತರಿಸಿಕೊಂಡು ಟೀಮ್ ಇಂಡಿಯಾ ಕೂಡಿಕೊಂಡಿರುವ ರಿಷಭ್ ಪಂತ್ ಕೂಡ ಇವರ ಜೊತೆಗೆ ಬ್ಯಾಟಿಂಗ್ ನಡೆಸಿದರು.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ನಾಟಿಂಗ್‌ಹ್ಯಾಮ್, ಲಂಡನ್, ಲೀಡ್ಸ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಆಗಸ್ಟ್ 4 ರಿಮದ ಆರಂಭವಾಗಲಿರುವ ಈ ಸರಣಿ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ. ಈ ಸರಣಿಯ ಮೂಲಕ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯಲ್ಲಿ ಭಾಗಿಯಾಗಲಿದೆ.

ಟೀಮ್ ಇಂಡಿಯಾ ಆಟಗಾರರು ಈಗಾಗಲೇ ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿತ್ತು. ಇದಾದ ನಂತರ ಜುಲೈ 29ರಿಂದ ಇಂಟ್ರಾ ಸ್ಕ್ವಾಡ್ ಟೆಸ್ಟ್ ಪಂದ್ಯವನ್ನು ಕೂಡ ಭಾರತ ತಂಡ ಆಡಲಿದೆ.

ಇನ್ನು ಇಂದಿನ ಅಭ್ಯಾಸ ಸಂದರ್ಭದ ಕೆಲ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಹಂಚಿಕೊಂಡಿದೆ. ಆಟಗಾರರ ಅಭ್ಯಾಸದ ಜೊತೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಗಹನವಾದ ಚರ್ಚೆಯಲ್ಲಿ ತೊಡಗಿರುವುದು ಗಮನ ಸೆಳೆದಿದೆ.

ಭಾರತ ತಂಡದ ಪ್ರಮುಖ ಆಟಗಾರರು ಎರಡನೇ ಪಂದ್ಯದಿಂದ ಆಚೆ | Oneindia Kannada

Story first published: Tuesday, July 27, 2021, 20:43 [IST]
Other articles published on Jul 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+