ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಇನ್ನಿಂಗ್ಸ್ ಸಹಿತ ಸೋತ ಕೆಟ್ಟ ದಾಖಲೆಗಳು

ಲೀಡ್ಸ್: ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿ ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಸಹಿತ ಪಂದ್ಯ ಸೋತ ದಾಖಲೆ ಪಟ್ಟಿಗೆ ಮತ್ತೊಂದು ಪಂದ್ಯ ಸೇರ್ಪಡೆಯಾಗಿದೆ.
ಕೊಹ್ಲಿ ನಾಯಕತ್ವದಲ್ಲಿ ಭಾರತ ಇನ್ನಿಂಗ್ಸ್ ಸಹಿತ ಪಂದ್ಯ ಸೋತ ದಾಖಲೆಗಳು
* ಭಾರತಕ್ಕೆ ಇನ್ನಿಂಗ್ಸ್ ಸಹಿತ 159 ರನ್ ಸೋಲು, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯ, 2018
* ಭಾರತಕ್ಕೆ ಇನ್ನಿಂಗ್ಸ್ ಸಹಿತ 76 ರನ್ ಸೋಲು, ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆದಿದ್ದ ಪಂದ್ಯ, 2021
ಲೀಡ್ಸ್ ಪಂದ್ಯದಲ್ಲಿ ಭಾರತದ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನ ನೀಡಿದ್ದರು. ಜೊತೆ ಬೌಲರ್‌ಗಳೂ ಕೂಡ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಅಸಮರ್ಥರಾದರು. ಆದರೂ ಐದು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂದಿದೆ. ಸೆಪ್ಟೆಂಬರ್ 2ರಂದು ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇತ್ತಂಡಗಳ ಸ್ಕೋರ್‌ಕಾರ್ಡ್
ತೃತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 19, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಇಶಾಂತ್ ಶರ್ಮಾ 8, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 78 ರನ್ ಗಳಿಸಿತ್ತು. ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್ ನೊಂದಿಗೆ 132.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 432 ರನ್ ಬಾರಿಸಿತ್ತು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 59, ಕೆಎಲ್ ರಾಹುಲ್ 8, ಚೇತೇಶ್ವರ ಪೂಜಾರ 91, ವಿರಾಟ್ ಕೊಹ್ಲಿ 55, ಅಜಿಂಕ್ಯ ರಹಾನೆ 10, ರಿಷಭ್ ಪಂತ್ 1, ರವೀಂದ್ರ ಜಡೇಜಾ 30, ಮೊಹಮ್ಮದ್ ಶಮಿ 6, ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1 ರನ್‌ನೊಂದಿಗೆ ಭಾರತ 99.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 278 ರನ್ ಗಳಿಸಿ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications