ಭಾರತ vs ಇಂಗ್ಲೆಂಡ್ ಟೆಸ್ಟ್: ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 260 ರನ್

ಸೌಥಾಂಪ್ಟನ್, ಸೆಪ್ಟೆಂಬರ್ 1:ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂಗ್ಲೆಂಡ್ ಎದುರು 4ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಇಂಗ್ಲೆಂಡ್ ಮೂರನೇ ದಿನದಾಂತ್ಯಕೆ 91.5 ಓವರ್ ಗಳಲ್ಲಿ 8 ವಿಕೆಟ್ ಕಳೆದು 260 ರನ್ ಪೇರಿಸಿದೆ.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಅಲಾಸ್ಟೇರ್ ಕುಕ್ 12, ಕೆ ಜೆನ್ನಿಂಗ್ಸ್ 36, ಮೊಯೀನ್ ಆಲಿ 9, ಜೋ ರೂಟ್ 48, ಜಾನಿ ಬೇರ್ಸ್ಟೋವ್ 0, ಬೆನ್ ಸ್ಟೋಕ್ಸ್ 30, ಜಾಸ್ ಬಟ್ಲರ್ 69, ಆದಿಲ್ ರಶೀದ್ 11 ರನ್ ನೊಂದಿಗೆ ನಿರ್ಗಮಿಸಿದ್ದಾರೆ. ಸ್ಯಾಮ್ ಕರನ್ (37) ಕ್ರೀಸ್ ನಲ್ಲಿದ್ದಾರೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 246 ರನ್ ಪೇರಿಸಿತ್ತು. ಭಾರತ, ಚೇತೇಶ್ವರ ಪೂಜಾರ ಅವರ ಶತಕ ನೆರವಿನೊಂದಿಗೆ 273 ರನ್ ಪೇರಿಸಿತ್ತು. 4ನೇ ದಿನ ಭಾರತ ತಂಡ ಇಂಗ್ಲೆಂಡ್ ಎಲ್ಲಾ ವಿಕೆಟ್ ಕೆಡವಿ ದ್ವಿತೀಯ ಇನ್ನಿಂಗ್ಸ್ ನಲ್ಲಿ ಹೆಚ್ಚು ರನ್ ಕಲೆ ಹಾಕಿದರೆ 4ನೇ ಟೆಸ್ಟ್ ಭಾರತ ಕೈವಶವಾಗಲಿದೆ. 5 ಟೆಸ್ಟ್ ಗಳ ಈ ಸರಣಿಯಲ್ಲಿ ಭಾರತ 1-2ರ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ನಿಯಂತ್ರಿಸಿರುವ ಭಾರತ, ಎರಡನೆಯ ದಿನದ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆ ಅನುಭವಿಸುವ ಭೀತಿಯಲ್ಲಿತ್ತು. ಆಗ ತಂಡದ ಬೆಂಬಲಕ್ಕೆ ಪೂಜಾರ ನಿಂತರು.
ವಿಕೆಟ್ ಕಾವಲು ನಿಂತ ಪೂಜಾರ ಭರ್ಜರಿ 132 ರನ್ ಪೇರಿಸಿ ತಂಡಕ್ಕೆ ಬಲ ತುಂಬಿದರು. ಪೂಜಾರ ಬಿಟ್ಟರೆ ಭಾರತಕ್ಕೆ ವಿರಾಟ್ ಕೊಹ್ಲಿ 46 ರನ್ ಸೇರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications