Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ vs ಭಾರತ ಟೆಸ್ಟ್: ಇಂಗ್ಲೆಂಡ್ 2 ವಿಕೆಟ್ ಕಳೆದು 114 ರನ್

India vs England, Live Cricket Score, 5th Test Day 3 at The Oval

ಲಂಡನ್, ಸೆಪ್ಟೆಂಬರ್ 9: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಿಂದ ಕಳೆದುಕೊಂಡಿದ್ದಾಗಿದೆ. ರವೀಂದ್ರ ಜಡೇಜಾ ಅವರ 86 ರನ್ ಬೆಂಬಲದೊಂದಿಗೆ ಭಾರತ ತಂಡ ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 95 ಓವರ್ ಮುಕ್ತಾಯಕ್ಕೆ 292 ರನ್ ಪೇರಿಸಿ 40 ರನ್ ಹಿನ್ನಡೆ ಅನುಭವಿಸಿದೆ.

ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಇಂಗ್ಲೆಂಡ್ ಭಾನುವಾರ (ಸೆ. 9) ದಿನದಾಂತ್ಯಕ್ಕೆ 43 ಓವರ್ ನಲ್ಲಿ 2 ವಿಕೆಟ್ ಕಳೆದು 114 ರನ್ ಪೇರಿಸಿದೆ. ಕೆ ಜೆನ್ನಿಂಗ್ಸ್ 10, ಮೋಯೀನ್ ಆಲಿ 20 ರನ್ ಪೇರಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಂತಾರಾಷ್ಟ್ರೀಯ ಕೊನೆಯ ಪಂದ್ಯ ಆಡುತ್ತಿರುವ ಅಲಾಸ್ಟೇರ್ ಕುಕ್ (46), ನಾಯಕ ಜೋ ರೂಟ್ (29) ಕ್ರೀಸ್ ನಲ್ಲಿದ್ದಾರೆ.

ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42378

ಮೂರನೇ ದಿನ (ಸೆಪ್ಟೆಂಬರ್ 9) ಭಾರತ 79 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 240 ರನ್ ಪೇರಿಸಿತ್ತು. ಗದೆ ಹನುಮ ವಿಹಾರಿ ಅವರು 56 ರನ್ ಗಳಿಸಿ ನಿರ್ಗಮಿಸಿದ್ದಾರೆ. ಕ್ರೀಸ್ ನಲ್ಲಿ ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ ಇದ್ದರು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ, ಕೆಎಲ್ ರಾಹುಲ್ 37, ಚೇತೇಶ್ವರ್ ಪೂಜಾರ 37, ನಾಯಕ ವಿರಾಟ್ ಕೊಹ್ಲಿ 49, ಹನುಮ ವಿಹಾರಿ ಅಜೇಯ 25 ರನ್ ನೆರವಿನೊಂದಿಗೆ 51 ಓವರ್ ಮುಕ್ತಾಯಕ್ಕೆ 174 ರನ್ ಪೇರಿಸಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ 71 ರನ್ ಪೇರಿಸಿದ ಕುಕ್ ಬುಮ್ರಾ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಮೋಯೀನ್ ಆಲಿ ಅವರಿಂದ ಇಂಗ್ಲೆಂಡ್ ತಂಡಕ್ಕೆ ಅರ್ಧ ಶತಕ ರನ್ ಕೊಡುಗೆ ಲಭಿಸಿದ್ದು ಮೊತ್ತ ಹೆಚ್ಚಳಕ್ಕೆ ಕಾರಣವಾಯ್ತು. ಆಲಿ ಅವರು ಭರ್ತಿ ಅರ್ಧ ಶತಕ ಬಾರಿಸಿದ್ದರು. ಹೀಗಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 332 ಬೃಹತ್ ರನ್ ಕಲೆ ಹಾಕಿತ್ತು.

Story first published: Sunday, September 9, 2018, 23:25 [IST]
Other articles published on Sep 9, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+