ಟೆಸ್ಟ್: ಕೊಹ್ಲಿ ಹೋರಾಟ, ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 274ರನ್

ಬರ್ಮಿಂಗ್ ಹ್ಯಾಮ್, ಆಗಸ್ಟ್ 2: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ಕೊಹ್ಲಿ (149/225) ಶತಕದ ನೆರವಿನೊಂದಿಗೆ ಭಾರತ 274 ರನ್ ಗಳಿಸಿದೆ. ಕೊಹ್ಲಿಯ ಏಕಾಂಗಿ ಹೋರಾಟ ಇಂಗ್ಲೆಂಡ್ ನೀಡಿದ್ದ ಅಂತರವನ್ನು ಕಿರಿದುಗೊಳಿಸಲು ಭಾರತಕ್ಕೆ ನೆರವು ನೀಡಿತು.
ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 287 ರನ್ ಗಳಿಸಿತ್ತು. ಹಾಗಾಗಿ ಭಾರತಕ್ಕೆ 13ರನ್ ಹಿನ್ನಡೆಯಾದಂತಾಗಿದೆ. ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಇಂಗ್ಲೆಂಡ್ 3.4ನೇ ಓವರ್ ಗೆ ಮೊದಲ ವಿಕೆಟ್ ಕಳೆದುಕೊಂಡು 9 ರನ್ ಪೇರಿಸಿತ್ತು.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಪಡೆದುಕೊಂಡರು. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟ ನೀಡಿದ್ದ ಮುರಳಿ ವಿಜಯ್ ಮೊದಲು ವಿಕೆಟ್ ಒಪ್ಪಿಸಿದರು.
ಅವರ ಬೆನ್ನಲ್ಲೇ ಕೆ.ಎಲ್. ರಾಹುಲ್ ಕೂಡ ಪೆವಿಲಿಯನ್ ಹಾದಿ ಹಿಡಿದರು. ಅಲ್ಲಿಂದ ತಂಡ ಕುಸಿತದ ಹಾದಿಗೆ ಸಿಲುಕಿತು. ಧವನ್, ದಿನೇಶ್ ಕಾರ್ತಿಕ್, ಅಜಿಂಕ್ಯ ರಹಾನೆ ಮತ್ತು ದಿನೇಶ್ ಕಾರ್ತಿಕ್ ವೈಫಲ್ಯ ಅನುಭವಿಸಿದರು.
ನಾಯಕ ವಿರಾಟ್ ಕೊಹ್ಲಿ ಶತಕ ಗಳಿಸಿದರೂ ಎರಡು ಜೀವದಾನ ಪಡೆದುಕೊಂಡರು.
ಬುಧವಾರ ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಗರಿಷ್ಠ ಮೊತ್ತ ಪೇರಿಸುವಲ್ಲಿ ಎಡವಿತ್ತು. ನಾಯಕ ರೂಟ್ (80/156), ಬೇರ್ಸ್ಟೋವ್ (70/88) ಮತ್ತು ಕೀಟನ್ ಜೆನ್ನಿಂಗ್ಸ್ (42/98) ರನ್ ಬೆಂಬಲದೊಂದಿಗೆ 88 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 285 ರನ್ ಸಾಧಾರಣ ಮೊತ್ತ ಪೇರಿಸಿತ್ತು.
ಪಂದ್ಯದ ಎರಡನೇ ದಿನವಾದ ಇಂದು (ಆ.2) ಕ್ರೀಸ್ ನಲ್ಲಿದ್ದ ಸ್ಯಾಮ್ ಕರ್ರನ್ (24/71) ಮತ್ತು ಜೇಮ್ಸ್ ಆ್ಯಂಡರ್ಸನ್ ಇವರಲ್ಲಿ ಆ್ಯಂಡರ್ಸನ್ 2 ರನ್ ಗಳಿಸಿ (15 ಎಸೆತ) ಔಟಾದರು. ಇಂಗ್ಲೆಂಡ್ 89.4 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 287ರನ್ ಪೇರಿಸಲಷ್ಟೇ ಶಕ್ತವಾಯಿತು.
ಭಾರತದ ಬೌಲರ್ ರವಿಚಂದ್ರನ್ ಅಶ್ವಿನ್ 4 (60 ರನ್ನಿಗೆ) ವಿಕೆಟ್, ಶಮಿ 64 ರನ್ನಿಗೆ 3 ವಿಕೆಟ್ ಉರುಳಿಸಿ ಆಂಗ್ಲರನ್ನು ಕಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications