For Quick Alerts
ALLOW NOTIFICATIONS  
For Daily Alerts
 

1ನೇ ಟೆಸ್ಟ್ Live Score: ಇಂಗ್ಲೆಂಡ್ ಎದುರು ಭಾರತದಿಂದ ಎಚ್ಚರಿಕೆಯ ಆಟ

India vs England Live Score, 1st Test, Day 3 Report

ಬರ್ಮಿಂಗ್ ಹ್ಯಾಮ್, ಆಗಸ್ಟ್ 3: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಎಚ್ಚರಿಕೆ ಆಟವಾಡುತ್ತಿದೆ. ಆಗಸ್ಟ್ 3ರ ದಿನದಾತ್ಯಂಕ್ಕೆ ಭಾರತ 36 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 110 ರನ್ ಪೇರಿಸಿತ್ತು. ನಾಯಕನ ಆಟವಾಡುತ್ತಿರುವ ಕೊಹ್ಲಿ ವಿಕೆಟ್ ಕಾವಲು ಕಾದಿದ್ದು ಗೆಲುವಿನಾಸೆ ಉಳಿದುಕೊಂಡಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

1
42374

ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನೀಡಿದ 180+14 ರನ್ ಗುರಿಯನ್ನು ಬೆನ್ನಟ್ಟಿದ ಭಾರತದಿಂದಲೂ ಇತ್ತಮ ಬ್ಯಾಟಿಂಗ್ ಕಂಡುಬರಲಿಲ್ಲ. ಮುರಳಿ ವಿಜಯ್ (6/17), ಶಿಖರ್ ಧವನ್ (13/24), ಕೆಎಲ್ ರಾಹುಲ್ (13/24), ಅಜಿಂಕ್ಯ ರಹಾನೆ (2/16) ಮತ್ತು ಆರ್ ಅಶ್ವಿನ್ (13/15) ಕನಿಷ್ಠ ರನ್ನಿಗೆ ವಿಕೆಟ್ ಒಪ್ಪಿಸಿದ್ದರು.

ಈ ವೇಳೆ ಎಚ್ಚರಿಕೆಯ ಆಟದ ಮೂಲಕ ಕ್ರೀಸ್ ಗೆ ಅಂಟಿ ನಿಂತಿದ್ದು ನಾಯಕ ವಿರಾಟ್ ಕೊಹ್ಲಿ ಮಾತ್ರ. ದಿನದಾಂತ್ಯಕ್ಕೆ 76 ಎಸೆತಗಳನ್ನು ಎದುರಿಸಿದ ಕೊಹ್ಲಿ 43 ರನ್ ನೊಂದಿಗೆ ತಂಡಕ್ಕೆ ಬಲ ತುಂಬಿದರು. ಕೊಹ್ಲಿಯೊಂದಿಗೆ ಕ್ರೀಸ್ ನಲ್ಲಿರುವ ದಿನೇಶ್ ಕಾರ್ತಿಕ್ 18 (44) ಗಳಿಸಿದ್ದಾರೆ.

ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 180ಕ್ಕೆ ಆಲೌಟ್ ಆಗಿತ್ತು. ಹಾಗಾಗಿ ಮೊದಲ ಇನ್ನಿಂಗ್ಸ್ ನಲ್ಲಿನ 13 ರನ್ ಹಿನ್ನಡೆ ಸೇರಿಸಿ, ಗೆಲ್ಲಲು ಭಾರತಕ್ಕೆ 194 ರನ್ ಗಳ ಅವಶ್ಯಕತೆಯಿತ್ತು. ಮಂದ ಬೆಳಕಿ ಕಾರಣ ಒಂದು ಬಾರಿ ಪಂದ್ಯ ಸ್ಥಗಿತಗೊಂಡಿತ್ತು. ಮತ್ತೆ ಚಾಲೂಗೊಂಡ ಪಂದ್ಯದಲ್ಲಿ ಇಂಗ್ಲೆಂಡ್ 49 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 160 ರನ್ ಪೇರಿಸಿತ್ತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ರನ್ ಕದಿಯುವಿಕೆಗೆ ತಡೆಯೊಡ್ಡಿ ಆರ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಬೌಲಿಂಗ್ ಪಾರಮ್ಯ ಮೆರೆದಿದ್ದರು. ಅಶ್ವಿನ್ 59ಕ್ಕೆ 3 ವಿಕೆಟ್ ಉರುಳಿಸಿದ್ದರೆ, ಇಶಾಂತ್ 51 ರನ್ನಿಗೆ 5, ಉಮೇಶ್ ಯಾದವ್ 20 ರನ್ನಿಗೆ 2 ವಿಕೆಟ್ ಕೆಡವಿ ಇಂಗ್ಲೆಂಡ್ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡಿದ್ದರು.

ಪ್ರಥಮ ಇನ್ನಿಂಗ್ಸ್ ನಲ್ಲಿ 89.4 ಓವರ್ ಗೆ ಇಂಗ್ಲೆಂಡ್ 287ರನ್ ಗಳಿಸಿತ್ತು. ಗರಿಷ್ಠ ರನ್ ಗಳಿಸುವ ಯೋಜನೆಯಲ್ಲಿ ಗುರುವಾರ ಮೊದಲ ಇನ್ನಿಂಗ್ಸ್ ಗೆ ಇಳಿದಿದ್ದ ಭಾರತದ ಯೋಜನೆಯೂ ತಲೆಕೆಳಗಾಗಿತ್ತು. ಕೊಹ್ಲಿ ಏಕಾಂಗಿ ಹೋರಾಟದೊಂದಿಗೆ ಭಾರತ 76 ಓವರ್ ಗೆ 274 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತ್ತು.

ಗುರುವಾರ (ಆ.2) ಭಾರತದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಬೌಲಿಂಗ್ ಎದುರಿಸಲಾಗದೆ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿದರೆ, ಮತ್ತೊಂದೆಡೆ ಗಟ್ಟಿಯಾಗಿ ಕ್ರೀಸ್ ಗೆ ಆತು ನಿಂತಿದ್ದ ಕೊಹ್ಲಿ (149) ಭರ್ಜರಿ ಶತಕ ಬಾರಿಸಿ ಕುಸಿತದ ಹಾದಿಯಲ್ಲಿದ್ದ ಭಾರತವನ್ನು ಮೇಲೆತ್ತಿದ್ದರು.

Story first published: Saturday, August 4, 2018, 3:19 [IST]
Other articles published on Aug 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+