
ಲಂಡನ್, ಆಗಸ್ಟ್ 10: ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್ ನಲ್ಲೂ ಭಾರತದ ಬ್ಯಾಟ್ಸ್ಮನ್ ಗಳು ಕಳಪೆ ಆಟಕ್ಕೆ ಸಾಕ್ಷಿಯಾಗಿದ್ದಾರೆ. ಶುಕ್ರವಾರ (ಆ.10) ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 35.2 ಓವರ್ ಗೆ 107 ರನ್ ಪೇರಿಸಿ ಆಲೌಟ್ ಆಗಿದೆ. ಆರ್ ಅಶ್ವಿನ್ ಅವರ 29 (38) ರನ್ನೇ ಈ ವೇಳೆ ಅಧಿಕವೆನಿಸಿತು.
ಪಂದ್ಯದ Score ಕೆಳಗಿದೆ
ಅಶ್ವಿನ್ ಬಿಟ್ಟರೆ ನಾಯಕ ಕೊಹ್ಲಿ 23 (57), ಅಜಿಂಕ್ಯ ರಹಾನೆ 18 (44), ಹಾರ್ದಿಕ್ ಪಾಂಡ್ಯ 11 (10) ರನ್ ಸೇರಿಸಿದರು. ಉಳಿದವರೆಲ್ಲರೂ 10ರೊಳಗೆ ಪೆವಿಲಿಯನ್ ದಾರಿ ಹಿಡಿಯುವ ಮೂಲಕ ಭಾರತದ ನೀರಸ ಆಟಕ್ಕೆ ಸಾಕ್ಷಿಯಾದರು. ಭಾರತದ ಇನ್ನಿಂಗ್ಸ್ ವೇಳೆ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಕೇವಲ 20 ರನ್ನಿಗೆ 5 ವಿಕೆಟ್ ಉರುಳಿಸಿ ಪಾರಮ್ಯ ಮೆರೆದರು.
ಗುರುವಾರ (ಆ.9) ಮೊದಲ ದಿನದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಶುಕ್ರವಾರವೂ ಮಳೆ ಪಂದ್ಯಾರಂಭದಿಂದಲೂ ಕಾಡತೊಡಗಿತ್ತು.
ಒದ್ದೆ ಮೈದಾನ ಆಂಗ್ಲರಿಗೆ ಅನುಕೂಲವನ್ನೊದಗಿಸಿದ್ದು, 8.3ನೇ ಓವರ್ ಗೆ ಪಂದ್ಯ ಮತ್ತೆ ನಿಲುಗಡೆಯಾಗಿತ್ತು. ಈ ವೇಳೆ ಭಾರತ 3 ವಿಕೆಟ್ ಕಳೆದು ಬರೀ 15 ರನ್ ಪೇರಿಸಿತ್ತು. ಮುರಳಿ ವಿಜಯ್ (0/5), ಕೆಎಲ್ ರಾಹುಲ್ (8/14), ಚೇತೇಶ್ವರ್ ಪೂಜಾರ (1/25) ನಿರ್ಗಮಿಸಿದ್ದರು.
ಪಂದ್ಯಾರಂಭದಲ್ಲೇ ಭಾರತ ಅಘಾತವನ್ನನುಭವಿಸಿದೆ. ಆ್ಯಂಡರ್ಸನ್ ಅವರ ಮೊದಲ ಓವರ್ ನಲ್ಲಿ ಮುರಳಿ ವಿಜಯ್ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಕೆಎಲ್ ರಾಹುಲ್ ಕೂಡ ಪೆವಿಲಿಯನ್ ಗೆ ನಡೆದಿದ್ದಾರೆ. ಭಾರತ 6.3 ಓವರ್ ಗೆ 2 ವಿಕೆಟ್ ಕಳೆದು 11 ರನ್ ಪೇರಿಸಿದೆ. ಮಳೆಯ ಕಾರಣ ಪಂದ್ಯ ನಿಲುಗಡೆಯಾಗಿತ್ತು.
ಇಂಗ್ಲೆಂಡ್ ತಂಡ: ಜೋ ರೂಟ್ (ಸಿ), ಜೇಮ್ಸ್ ಆಂಡರ್ಸನ್, ಜಾನಿ ಬೇರ್ಸ್ಟೋವ್ (ವಿ.ಕೆ.), ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಅಲಾಸ್ಟೇರ್ ಕುಕ್, ಸ್ಯಾಮ್ ಕ್ಯುರನ್, ಕೀಟನ್ ಜೆನ್ನಿಂಗ್ಸ್, ಆಲ್ಲಿ ಪೋಪ್, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಮೊಯೆನ್ ಅಲಿ, ಜೇಮೀ ಪೋರ್ಟರ್.
ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಕೆಎಲ್ ರಾಹುಲ್, ಎಮ್ ವಿಜಯ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆ), ಆರ್ ಅಶ್ವಿನ್, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.