ಭಾರತ v ಇಂಗ್ಲೆಂಡ್ ಟೆಸ್ಟ್: ವೋಕ್ಸ್ ಶತಕ, ಇಂಗ್ಲೆಂಡ್ ಭರ್ಜರಿ ಮುನ್ನಡೆ

ಲಂಡನ್, ಆಗಸ್ಟ್ 11: ಲಂಡನ್ ನ ಲಾರ್ಡ್ಸ್ ಸ್ಟೇಡಿಯಂನಲ್ಲಿನ ದ್ವಿತೀಯ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಭಾರತದೆದುರು 250 ರನ್ ಭರ್ಜರಿ ಮುನ್ನಡೆ ಸಾಧಿಸಿದೆ. ಶನಿವಾರ (ಆಗಸ್ಟ್ 11) ಮೂರನೇ ದಿನದಾಂತ್ಯಂಕ್ಕೆ ಇಂಗ್ಲೆಂಡ್ 81 ಓವರ್ ಗೆ 6 ವಿಕೆಟ್ ಕಳೆದು 357 ರನ್ ಸೇರಿಸಿತ್ತು.
ಜಾನಿ ಬೇರ್ಸ್ಟೋವ್ (93/144), ಕ್ರಿಸ್ ವೋಕ್ಸ್ ಅಜೇಯ 120 (159) ರನ್ ನೆರವಿನಿಂದ ಇಂಗ್ಲೆಂಡ್ ಗರಿಷ್ಠ ಮೊತ್ತ ಕಲೆ ಹಾಕಿತು. ಶನಿವಾರದ ಆಟ ಮುಕ್ತಾಯದ ಹೊತ್ತು ಶತಕದ ಸರದಾರ ವೋಕ್ಸ್ ಜೊತೆ ಸ್ಯಾಮ್ ಕರನ್ (22/24) ಕ್ರೀಸ್ ನಲ್ಲಿದ್ದರು.
ಮೂರನೇ ದಿನದ ಇಂಗ್ಲೆಂಡ್ ಮೊತ್ತವನ್ನು ಗಮನಿಸಿದರೆ ಭಾರತಕ್ಕೆ ದ್ವಿತೀಯ ಟೆಸ್ಟ್ ದುಬಾರಿಯೆನಿಸುವುದರಲ್ಲಿದೆ. ಆಂಗ್ಲರ ಮೊದಲ ಇನ್ನಿಂಗ್ಸನ್ನು ಶೀಘ್ರ ಕೊನೆಗೊಳಿಸಿ ದ್ವಿತೀಯ ಇನ್ನಿಂಗ್ಸ್ ನಲ್ಲಿ ಹೆಚ್ಚು ರನ್ ಸಂಪಾದಿಸದಿದ್ದರೆ ಭಾರತಕ್ಕೆ ಎರಡನೇ ಟೆಸ್ಟ್ ನಲ್ಲೂ ಸೋಲಿನ ಕಹಿ ಸಿಗಲಿದೆ.
ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿರುವ ಭಾರತ ಎರಡನೇ ಟೆಸ್ಟನ್ನೂ ಕೈಚೆಲ್ಲಿದ್ದರೆ ಸರಣಿ ಸೋಲಿನ ಒತ್ತಡಕ್ಕೆ ಸಿಲುಕಲಿದೆ. ಯಾವುದಕ್ಕೂ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ ಮುಕ್ತಾಯ ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತದ ಆಟ ದ್ವಿತೀಯ ಟೆಸ್ಟ್ ಫಲಿತಾಂಶವನ್ನು ನಿರ್ಧರಿಸಲಿದೆ.
ಇಂಗ್ಲೆಂಡ್ ತಂಡ: ಜೋ ರೂಟ್ (ಸಿ), ಜೇಮ್ಸ್ ಆಂಡರ್ಸನ್, ಜಾನಿ ಬೇರ್ಸ್ಟೋವ್ (ವಿ.ಕೆ.), ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಅಲಾಸ್ಟೇರ್ ಕುಕ್, ಸ್ಯಾಮ್ ಕ್ಯುರನ್, ಕೀಟನ್ ಜೆನ್ನಿಂಗ್ಸ್, ಆಲ್ಲಿ ಪೋಪ್, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಮೊಯೆನ್ ಅಲಿ, ಜೇಮೀ ಪೋರ್ಟರ್.
ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಕೆಎಲ್ ರಾಹುಲ್, ಎಮ್ ವಿಜಯ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆ), ಆರ್ ಅಶ್ವಿನ್, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications