India vs England 3rd Test Live Update: ಗೆಲುವಿನತ್ತ ಭಾರತ

ನ್ಯಾಟಿಂಗ್‌ಹ್ಯಾಮ್, ಆಗಸ್ಟ್ 21: ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ.
ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 4 ವಿಕೆಟ್ 84 ರನ್ ಗಳಿಸಿದೆ.
ನಾಲ್ಕನೆಯ ದಿನದಾಟ ಆರಂಭಿಸಿದ ಇಂಗ್ಲೆಂಡ್ ಇಬ್ಬರೂ ಓಪನರ್‌ಗಳ ವಿಕೆಟ್ ಕಳೆದುಕೊಂಡಿತು. ಕೀಟನ್ ಜೆನ್ನಿಂಗ್ಸ್ ಮತ್ತು ಅಲೆಸ್ಟರ್ ಕುಕ್, ಇಶಾಂತ್ ಶರ್ಮಾ ಅವರಿಗೆ ವಿಕೆಟ್ ಒಪ್ಪಿಸಿದರು.
ನಾಯಕ ಜೋ ರೂಟ್ ಮತ್ತು ಓಲಿ ಪೋಪ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇಬ್ಬರೂ ಸ್ಲಿಪ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಅತಿ ಜಾಗರೂಕತೆಯ ಆಟವಾಡಿದ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ವಿಕೆಟ್ ಕಾಪಾಡಿಕೊಂಡರು.
ಇಂಗ್ಲೆಂಡ್ ತಂಡ ಗೆಲುವಿಗೆ 437 ರನ್ ಗಳಿಸಬೇಕಾಗಿದ್ದು, ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಪ್ರಯತ್ನ ಮುಂದುವರಿಸಲು ಕೂಡ ಇನ್ನೂ ಒಂದೂವರೆ ದಿನ ಆಡಬೇಕಿದೆ.
ಟೆಸ್ಟ್ ಸರಣಿಯಲ್ಲಿ ಮೊದಲ ಗೆಲುವಿನ ರುಚಿ ಸವಿಯಲು ಭಾರತಕ್ಕೆ ಆರು ವಿಕೆಟ್‌ಗಳ ಅಗತ್ಯವಿದೆ. ಊಟದ ವಿರಾಮದ ಬಳಿಕವೂ ಇದೇ ರೀತಿ ಶಿಸ್ತಿನ ದಾಳಿ ನಡೆಸಿದರೆ ಗೆಲುವು ಸುಲಭವಾಗಲಿದೆ.
ಕ್ರಿಕೆಟ್ ಟೆಸ್ಟ್ ಇತಿಹಾಸದಲ್ಲಿ 520 ರನ್ ಗುರಿಯನ್ನು ಬೆನ್ನತ್ತಿ ಗೆದ್ದ ಉದಾಹರಣೆ ಇಲ್ಲ. ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ 2003ರಲ್ಲಿ 417 ರನ್ ಗುರಿಯನ್ನು ಬೆನ್ನತ್ತಿ ಜಯ ದಾಖಲಿಸಿದ್ದು ಇದುವರೆಗಿನ ದಾಖಲೆ.
ಹೀಗಾಗಿ ಭಾರತಕ್ಕೆ ಈ ಟೆಸ್ಟ್ ಅನ್ನು ಗೆಲ್ಲುವ ಅವಕಾಶಗಳು ಹೆಚ್ಚಿದ್ದು, ಸರಣಿಯಲ್ಲಿ ಪುಟಿದೇಳುವ ಭರವಸೆ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications