ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 3-1ರಿಂದ ಟೆಸ್ಟ್ ಸರಣಿ ಸೋತ ಟೀಮ್ ಇಂಡಿಯಾ

India vs England Live Score, 4th Test Day 4 Live Score

ಸೌಥಾಂಪ್ಟನ್, ಸೆಪ್ಟೆಂಬರ್ 2: ಇಂಗ್ಲೆಂಡ್ ಎದುರು ಮೂರನೇ ಟೆಸ್ಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ತೋರಿದ ಭಾರತ 4ನೇ ಟೆಸ್ಟ್ ನಲ್ಲಿ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸುವುದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿದೆ. ಸರಣಿಯಲ್ಲಿ ಭಾರತ 3-1ರ ಹಿನ್ನಡೆ ಅನುಭವಿಸಿದೆ.

ಏಷ್ಯನ್ ಗೇಮ್ಸ್ ಗೆ ವರ್ಣರಂಜಿತ ತೆರೆ: ದೇಸಿ ತಂಡಕ್ಕೆ ರಾಣಿ ಮುಂದಾಳತ್ವಏಷ್ಯನ್ ಗೇಮ್ಸ್ ಗೆ ವರ್ಣರಂಜಿತ ತೆರೆ: ದೇಸಿ ತಂಡಕ್ಕೆ ರಾಣಿ ಮುಂದಾಳತ್ವ

ಭಾನುವಾರ ನಡದ 4ನೇ ಟೆಸ್ಟ್ ನ 4ನೇ ದಿನದಾಟದಲ್ಲಿ ಭಾರತ 69.4 ಓವರ್ ನಲ್ಲಿ 184 ರನ್ ಪೇರಿಸಿ 60 ರನ್ ಗಳಿಂದ ಶರಣಾಯಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಗೆಲ್ಲಲು 245 ರನ್ ಗುರಿ ನೀಡಲಾಗಿತ್ತು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42377

ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಸ್ಯಾಮ್ ಕರನ್ 78, ಮೋಯೀನ್ ಆಲಿ 40 ರನ್ ನೆರವಿನೊಂದಿಗೆ 76.4 ಓವರ್ ಗೆ 246 ರನ್ ಗಳಿಸಿ ಆಟ ಮುಗಿಸಿತ್ತು. ಗೆಲುವಿನ ವಿಶ್ವಾಸದಲ್ಲೇ ಇನ್ನಿಂಗ್ಸ್ ಗೆ ಇಳಿದ ಭಾರತದಿಂದಲೂ ಅಂಥ ಬ್ಯಾಟಿಂಗ್ ಕಾಣಲಿಲ್ಲ.

ಮೊದಲ ಇನ್ನಿಂಗ್ಸ ನಲ್ಲಿ ಭಾರತ ಹಿನ್ನಡೆ ಅನುಭವಿಸಲಿದೆ ಅಂದುಕೊಳ್ಳುತ್ತಿರುವಾಗಲೇ ಚೇತೇಶ್ವರ ಪೂಜಾರ ಕ್ರೀಸ್ ಗೆ ಅಂಟಿ ನಿಂತರು. ಪೂಜಾರ ಅವರ ಅಜೇಯ 132 ರನ್ ನೆರವಿನಿಂದ ಭಾರತ 273 ರನ್ ಪೇರಿಸಿ ಇನ್ನಿಂಗ್ಸ್ ನಲ್ಲಿ 27 ರನ್ ಮುನ್ನಡೆ ಸಾಧಿಸಿತು. ಪ್ರಥಮ ಇನ್ನಿಂಗ್ಸ್ ನಲ್ಲಿ ಪೂಜಾರ ಬಿಟ್ಟರೆ ನಾಯಕ ವಿರಾಟ್ ಕೊಹ್ಲಿ 46 ರನ್ ಸೇರಿಸಿದ್ದರು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಜಾಸ್ ಬಟ್ಲರ್ 69, ಜೋ ರೂಟ್ 48, ಸ್ಯಾಮ್ ಕರನ್ 46 ರನ್ ನೆರವಿನೊಂದಿಗೆ 271 ರನ್ ಪೇರಿಸಿತು. 245 ರನ್ ಚೇಸಿಂಗ್ ಗೆ ಇಳಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತ ಅಘಾತವನ್ನನುಭವಿಸಿತು.

ಶಿಖರ್ ಧವನ್ 17, ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 5, ಕೊಹ್ಲಿ 58, ಅಜಿಂಕ್ಯ ರಹಾನೆ 51, ಹಾರ್ದಿಕ್ ಪಾಂಡ್ಯ 0, ಪಂತ್ 18, ಇಶಾಂತ್ 0, ಶಮಿ 8, ಆರ್ ಅಶ್ವಿನ್ 25 ರನ್ ಪೇರಿಸಿ ಔಟಾದರು. 5ನೇ ಟೆಸ್ಟ್ ಭಾರತಕ್ಕೆ ಔಪಚಾರಿಕವಾಗಿದೆ.

Story first published: Sunday, September 2, 2018, 22:10 [IST]
Other articles published on Sep 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X