1ನೇ ಟೆಸ್ಟ್: ಕೊಹ್ಲಿ ಹೋರಾಟ ವ್ಯರ್ಥ, ಇಂಗ್ಲೆಂಡ್ ಗೆ 31 ರನ್ ಗೆಲುವು

ಬರ್ಮಿಂಗ್ ಹ್ಯಾಮ್, ಆಗಸ್ಟ್ 4: ಎಜ್ ಬಾಸ್ಟನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ 54.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 162 ರನ್ ಪೇರಿಸುವುದರೊಂದಿಗೆ 31 ರನ್ ನಿಂದ ಸೋಲೊಪ್ಪಿಕೊಂಡಿದೆ.
ಭಾರತ ಗೆಲುವಿಗಾಗಿ 194 ರನ್ ಗುರಿಯನ್ನು ಹೊಂದಿತ್ತು. ತಂಡಕ್ಕೆ ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ 51 (93) ರನ್ ಗೆ ವಿಕೆಟ್ ಒಪ್ಪಿಸಿ ನಡೆದಾಗಲೇ ಸೋಲಿನ ಭೀತಿ ಆರಂಭವಾಗಿತ್ತು. 47.3 ಓವರ್ ಮುಕ್ತಾಯಕ್ಕೆ ಭಾರತ 8 ವಿಕೆಟ್ ಕಳೆದು 142 ರನ್ ಪೇರಿಸಿತ್ತು.
ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಶನಿವಾರ (ಆಗಸ್ಟ್ 4) ನಾಲ್ಕನೇ ದಿನದ ಆರಂಭಕ್ಕೆ ಭಾರತ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಆದರೆ ಕ್ರೀಸ್ ನಲ್ಲಿದ್ದ ದಿನೇಶ್ ಕಾರ್ತಿಕ್ 20 (50) ರನ್ನಿಗೆ ಆ್ಯಂಡರ್ಸನ್ ಗೆ ವಿಕೆಟ್ ನೀಡಿದರು. ಅನಂತರ ಬ್ಯಾಟಿಂಗ್ ಗೆ ಇಳಿದ ಹಾರ್ದಿಕ್ ಪಾಂಡ್ಯ (31/61) ತಂಡವನ್ನು ಗೆಲ್ಲಿಸುವ ಆಸೆ ಮೂಡಿತ್ತಾದರೂ ಅದೂ ಸುಳ್ಳಾಯಿತು.
ಶುಕ್ರವಾರ ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನೀಡಿದ್ದ 180+14 ರನ್ ಗುರಿಯನ್ನು ಬೆನ್ನಟ್ಟಿದ ಭಾರತದಿಂದಲೂ ಇತ್ತಮ ಬ್ಯಾಟಿಂಗ್ ಕಂಡುಬರಲಿಲ್ಲ. ಮುರಳಿ ವಿಜಯ್ (6/17), ಶಿಖರ್ ಧವನ್ (13/24), ಕೆಎಲ್ ರಾಹುಲ್ (13/24), ಅಜಿಂಕ್ಯ ರಹಾನೆ (2/16) ಮತ್ತು ಆರ್ ಅಶ್ವಿನ್ (13/15) ಕನಿಷ್ಠ ರನ್ನಿಗೆ ವಿಕೆಟ್ ಒಪ್ಪಿಸಿದ್ದರು.
ಐದು ಪಂದ್ಯಗಳ ಟೆಸ್ಟ್ ಇದಾಗಿದ್ದು, ಮೊದಲ ಟೆಸ್ಟ್ ನಲ್ಲಿ ಭಾರತ (ಎರಡೂ ಇನ್ನಿಂಗ್ಸ್ ಸೇರಿಸಿ) 274+162 ರನ್ ಪೇರಿಸಿತ್ತು. ಇಂಗ್ಲೆಂಡ್ ತಂಡ 287+180 ರನ್ ನೊಂದಿಗೆ ಭಾರತಕ್ಕೆ ಸೋಲಿನ ಕಹಿಯುಣಿಸಿತು.
ಎಜ್ ಬಾಸ್ಟನ್ ಬೌಲಿಂಗ್ ಪಿಚ್ ಆಗಿದ್ದರಿಂದ ಎಚ್ಚರವಾಗಿ ಆಡದ ಭಾರತಕ್ಕೆ ಸೋಲಿನ ಮುಖಭಂಗವಾಗಿದೆ. ಇನ್ನೂ ನಾಲ್ಕು ಪಂದ್ಯಗಳಿದ್ದು, ಇಂಗ್ಲೆಂಡ್ ತಂಡ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿರುವುದರಿಂದ ಭಾರತಕ್ಕೆ ಸರಣಿ ಗೆಲುವಿನ ಒತ್ತಡ ಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications