For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

India vs England: Moeen Ali Pulls Out Of Last 2 Tests

ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಮೊಯೀನ್ ಅಲಿ ಭಾರತ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗಿರಲಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಈ ವಿಚಾರವನ್ನು ಮಂಗಳವಾರ (ಫೆಬ್ರವರಿ 16) ಖಾತರಿಪಡಿಸಿದ್ದಾರೆ. ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ತಂಡದಲ್ಲಿ ಅಲಿ ಹೆಸರಿಲ್ಲ.

ಮಂಗಳವಾರ ಮುಕ್ತಾಯಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಭಾರತ 317 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ 227 ರನ್‌ಗಳ ಜಯ ಕಂಡಿತ್ತು.

'ತವರಿಗೆ ವಾಪಸ್ಸಾಗಬೇಕು ಎಂದು ಮೊಯೀನ್ ಅಲಿ ಬಯಸಿದ್ದಾರೆ. ಅವರ ಪಾಲಿಗೆ ಇದು ಟ್ರಿಕಿ ಪ್ರವಾಸ ಆಗಿತ್ತು. ಆರಂಭದಲ್ಲೇ ಹೇಳಿರುವಂತೆ, ಬಯೋ ಬಬಲ್‌ನಿಂದ ಹೊರ ಹೋಗಲು ಆಟಗಾರ ಬಯಸಿದರೆ ಆತನಿಗೆ ಹೊರ ಹೋಗುವ ಆಯ್ಕೆಯಿದೆ. ಅದಕ್ಕೆ ಪ್ರಾಮುಖ್ಯತೆ ಇರುವುದರಿಂದ ನಾವು ಆ ಅದಕ್ಕೆ ಬದ್ಧರಾಗಿದ್ದೇವೆ,' ಎಂದು ಜೋ ರೂಟ್ ಹೇಳಿದ್ದಾರೆ.

ಭಾರತ ವಿರುದ್ಧದ ತೃತೀಯ ಟೆಸ್ಟ್‌ಗೆ 17 ಜನರ ಇಂಗ್ಲೆಂಡ್‌ ತಂಡ
ಜೋ ರೂಟ್ (ನಾಯಕ), ಜೇಮ್ಸ್ ಆ್ಯಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಝಾಕ್ ಕ್ರಾಲೆ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಆಲ್ಲಿ ಪೋಪ್, ಡೊಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಆಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

Story first published: Tuesday, February 16, 2021, 16:48 [IST]
Other articles published on Feb 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+