ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'

ಅಹ್ಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಮೊಟೆರಾ ಸ್ಟೇಡಿಯಂನ (ಸರ್ದಾರ್ ಪಟೇಲ್ ಸ್ಟೇಡಿಯಂ) ಹೆಸರನ್ನು ಬದಲಿಸಲಾಗಿದೆ. ಮೊಟೆರಾಕ್ಕೆ 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ಮರು ನಾಮಕರಣ ಮಾಡಲಿದೆ.
ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಸದ್ಯ ಮೂರನೇ ಟೆಸ್ಟ್ ಪಂದ್ಯ (ಫಿಂಕ್‌ಬಾಲ್ ಟೆಸ್ಟ್) ಇದೇ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಂದು ಆರಂಭಗೊಂಡು ಫೆಬ್ರವರಿ 28ರಂದು ಕೊನೆಗೊಳ್ಳಲಿದೆ.
1983ರಲ್ಲಿ ಮೊಟೆರಾ ಸ್ಟೇಡಿಯಂ ಅನ್ನು ಉದ್ಘಾಟಿಸಲಾಗಿತ್ತು. ಆರಂಭದಲ್ಲಿ ಸ್ಟೇಡಿಯಂನ ಸಾಮರ್ಥ್ಯ ಗರಿಷ್ಠ 54,000 ಇತ್ತು. ಆದರೆ 2017ರಿಂದ ಸ್ಟೇಡಿಯಂ ಮರು ನಿರ್ಮಾಣ ಆರಂಭವಾಗಿತ್ತು. ಅಂದರೆ ಸ್ಟೇಡಿಯಂ ಅನ್ನು ವಸ್ತರಿಸುವ ಕಾರ್ಯ ನಡೆದಿತ್ತು.
ಈಗ ಸ್ಟೇಡಿಯಂ ಸಾಮರ್ಥ್ಯವನ್ನು 54,000 ದಿಂದ 110000ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ವಿಶ್ವದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಈ ಸ್ಟೇಡಿಯಂ ಪಾತ್ರವಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟೇಡಿಯಂನ ಸಾಮರ್ಥ್ಯ 90,000 ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications