ಹೊಸ ವಾರ, ಹೊಸ ಮಾದರಿ ಆದರೆ ಗುರಿ ಒಂದೇ: ಟಿ20 ಸರಣಿ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಒಂದು ದಿನವಷ್ಟೇ ಬಾಕಿಯಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ತನ್ನ ಸ್ಪಷ್ಟ ಗುರಿಯನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಸಾಧಿಸಿದ ಗೆಲುವಿನ ಸರಣಿಯನ್ನು ಮುಂದುವರಿಸಲು ಬಯಸುವುದಾಗಿ ತಮ್ಮ ಮಾತಿನಲ್ಲಿ ಹೇಳಿಕೊಂಡಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
ಟ್ವಿಟ್ಟರ್‌ನಲ್ಲಿ ತಮ್ಮ ತರಬೇತಿಯ ಫೋಟೋವನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಹಂಚಿಕೊಂಡಿದ್ದಾರೆ. ಅದಕ್ಕೆ ವಿರಾಟ್ ಕೊಹ್ಲಿ ಈ ರೀತಿಯ ಬರಹವನ್ನು ಬರೆದುಕೊಂಡಿದ್ದಾರೆ ಕೊಹ್ಲಿ. "ಹೊಸ ವಾರ, ಹೊಸ ಮಾದರಿ, ಅದೇ ಗುರಿ. ಅದನ್ನು ಸಾಧಿಸೋಣ" ಎಂದು ಟ್ವೀಟ್ ಮಾಡಿದ್ದಾರೆ ಟೀಮ್ ಇಂಡಿಯಾ ನಾಯಕ.
ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿತ್ತು. ಈ ಗೆಲುವಿನ ಸರಪಳಿ ಮುಂದುವರಿಸಲು ನಾಯಕ ಕೊಹ್ಲಿ ಬಯಸುತ್ತಿರುವುದು ಸ್ಪಷ್ಟವಾಗಿದೆ. ಈ ಮೂಲಕ ಟಿ20 ಮಾದರಿಯಲ್ಲೊ ನಂಬರ್ 1 ತಂಡವಾಗಿರುವ ಇಯಾನ್ ಮಾರ್ಗನ್ ಬಳಗಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 72 ರನ್‌ಗಳಿಸಿದರೆ ವಿಶೇಷ ಮೈಲಿಗಲ್ಲೊಂದನ್ನು ಸಾಧಿಸಲಿದ್ದಾರೆ. 3000 ರನ್‌ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲು ಕೇವಲ 72 ರನ್‌ಗಳ ಅವಶ್ಯಕತೆಯಿದೆ. 2928 ರನ್‌ಗಳಿಸಿರುವ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications