ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವ ಭಾರತದ ಆಸೆಗೆ ಕಂಟಕ!

ಚೆನ್ನೈ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿ ನ್ಯೂಜಿಲೆಂಡ್ ವಿರುದ್ಧ ಸ್ಪರ್ಧಿಸಲು ಭಾರತಕ್ಕೆ ಹೆಚ್ಚಿನ ಅವಕಾಶವಿತ್ತು. ಆದರೆ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 9) ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಭಾರೀ ಅಂತರದಿಂದ ಸೋತಿರುವುದರಿಂದ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಪರ್ಧಿಸುವ ಭಾರತದ ಆಸೆಗೆ ಹಿನ್ನಡೆಯಾಗಿದೆ.
ಭಾರತಕ್ಕೆ ಪ್ರವಾಸ ಬಂದಿದ್ದ ಜೋ ರೂಟ್ ಪಡೆ ಮೊದಲನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ 578 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 178 ರನ್ ಗಳಿಸಿದ್ದರೆ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 337, ದ್ವಿತೀಯ ಇನ್ನಿಂಗ್ಸ್‌ನಲ್ಲಿ 192 ರನ್ ಗಳಿಸಿ 227 ರನ್‌ನಿಂದ ಸೋತಿದೆ. ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಟೇಬಲ್‌ನಲ್ಲಿ ಸದ್ಯ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.
ಇಂಗ್ಲೆಂಡ್ ವಿರುದ್ಧ ಭಾರತ ದೊಡ್ಡ ಅಂತರದಲ್ಲಿ ಸೋತಿರುವುದರಿಂದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್ ಹಾದಿ ಕಠಿಣವೆನಿಸಿದೆ. ಅದರ ಕುತೂಹಲಕಾರಿ ಅಂಕಿ-ಅಂಶಗಳು ಕೆಳಗಿವೆ.

ಭಾರತಕ್ಕೆ ಅವಕಾಶಗಳು
ನಾಲ್ಕು ಪಂದ್ಯಗಳ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತ 2ಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಸೋಲಬಾರದು. ಭಾರತ ಈಗಾಗಲೇ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯ ಸೋತಿರುವುದರಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಕೊಂಚ ಕಠಿಣವೆನಿಸಿದೆ. ಭಾರತ ಫೈನಲ್‌ಗೇರಬೇಕಾದರೆ ಟೆಸ್ಟ್ ಸರಣಿಯನ್ನು ಭಾರತ 2-0, 2-1, 3-0, 3-1 ಅಥವಾ 4-0ಯಿಂದ ಗೆಲ್ಲಬೇಕಿತ್ತು. ಆದರೆ ಇದರಲ್ಲಿ 2-0, 3-0ಯಿಂದಟೆಸ್ಟ್ ಸರಣಿ ಗೆಲ್ಲುವ ಸಾಧ್ಯತೆಈಗ ಇಲ್ಲವಾಗಿದೆ.

ಇಂಗ್ಲೆಂಡ್ ಏನು ಮಾಡಬೇಕು?
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಇಂಗ್ಲೆಂಡ್‌ಗೂ ಅವಕಾಶಗಳಿವೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಪಡೆ ಏನಾದರೂ 3-0, 3-1 ಅಥವಾ 4-0ಯಿಂದ ಗೆದ್ದರೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಹೋಗಲು ಇಂಗ್ಲೆಂಡ್‌ಗೆ ಅವಕಾಶವಿದೆ. ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 1-0ಯಿಂದ ಮುನ್ನಡೆಯಲ್ಲಿದೆ.

ಆಸ್ಟ್ರೇಲಿಯಾ ಗೆಲ್ಲಲು ಅವಕಾಶ
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸ್ಪರ್ಧಿಸಲು ಆಸ್ಟ್ರೇಲಿಯಾಕ್ಕೂ ಅವಕಾಶವಿದೆ. ಆದರೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನಾಧರಿಸಿ ಇದು ನಿರ್ಧಾರವಾಗಲಿದೆ. ಭಾರತ ತಂಡ ಇಂಗ್ಲೆಂಡ್ ಅನ್ನು 1-0ಯಿಂದ ಸೋಲಿಸಿದರೆ (ಇದು ಸಾಧ್ಯವಿಲ್ಲ), ಇಂಗ್ಲೆಂಡ್ ಭಾರತವನ್ನು 1-0ಯಿಂದ, 2-0ಯಿಂದ ಅಥವಾ 2-1ರಿಂದ ಸೋಲಿಸಿದರೆ, ಇಲ್ಲವೆ; ಭಾರತ-ಇಂಗ್ಲೆಂಡ್ ಸರಣಿ 0-0ಯಿಂದ (ಇದು ಸಾಧ್ಯವಿಲ್ಲ), 1-1ರಿಂದ ಅಥವಾ 2-2ರಿಂದ ಡ್ರಾ ಆದರೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications