For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೆಸ್ಟ್ ಸರಣಿ ವಿಜೇತರ ಹೆಸರಿಸಿದ ಓವೈಸ್ ಷಾ

India vs England: Owais Shah predicts the Test series winner

ನವದೆಹಲಿ: ಫೆಬ್ರವರಿ 5ರಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಕುತೂಹಲಕಾರಿ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಟೆಸ್ಟ್ ಸರಣಿ ಬಳಿಕ ಇತ್ತಂಡಗಳು ಐದು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಡಲಿವೆ.

ಇಂಗ್ಲೆಂಡ್ ಪರ 6 ಟೆಸ್ಟ್ ಪಂದ್ಯಗಳು, 71 ಏಕದಿನ ಪಂದ್ಯಗಳನ್ನಾಡಿರುವ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಒವೈಸ್ ಶಾ ಮುಂಬರಲಿರುವ ಟೆಸ್ಟ್‌ ಸರಣಿಯಲ್ಲಿ ವಿಜೇತರನ್ನು ಊಹಿಸಿದ್ದಾರೆ. ಆತಿಥೇಯ ಭಾರತ ಸರಣಿ ಗೆಲ್ಲಲಿದೆ ಎಂದು ಷಾ ಹೇಳಿದ್ದಾರೆ.

ಭಾರತದ ಪಿಚ್‌ಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಮುಂದಿದ್ದು ಕಾಡಬಲ್ಲ ಬೌಲರ್‌ಗಳ ಕೊರತೆ ಇಂಗ್ಲೆಂಡ್ ತಂಡದಲ್ಲಿದೆ. ಹೀಗಾಗಿ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಓವೈಸ್ ಅಭಿಪ್ರಾಯಿಸಿದ್ದಾರೆ. 42ರ ಹರೆಯದ ಷಾ, 2006ರಿಂದ 2009ರ ವರೆಗೆ ಇಂಗ್ಲೆಂಡ್‌ ಪರ ಆಡಿದ್ದರು.

ಇಂಗ್ಲೆಂಡ್ ಸ್ಪಿನ್ನರ್ ಮಾಂಟಿ ಪನೇಸರ್ ಕೂಡ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ 2-1 ಅಥವಾ 2-0ಯಿಂದ ಗೆಲ್ಲಲಿದೆ ಎಂದಿದ್ದಾರೆ. 1933ರಿಂದ 2016ರ ವರೆಗೆ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಒಟ್ಟು 60 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 19 ಸಾರಿ ಗೆದ್ದಿದೆ. ಇಂಗ್ಲೆಂಡ್ 13 ಸಾರಿ ಜಯ ಕಂಡಿದೆ. 28 ಪಂದ್ಯಗಳು ಡ್ರಾ ಎನಿಸಿವೆ.

Story first published: Friday, January 29, 2021, 16:42 [IST]
Other articles published on Jan 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+