ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ vs ಭಾರತದ ಸಂಭಾವ್ಯ ತಂಡ

By Mahesh
India Vs England: Probable India XI for 3rd Test at Nottingham

ಲಂಡನ್, ಆಗಸ್ಟ್ 17: ನ್ಯಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಭಾರಿ ಬದಲಾವಣೆಯ ನಿರೀಕ್ಷೆಯಿದೆ. ಆದರೆ, ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬದಲಿಗೆ ರಿಷಪ್ ಪಂತ್ ಗೆ ಅವಕಾಶ ಸಿಗಬಹುದು.

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿರುವ ವಿರಾಟ್ ಕೊಹ್ಲಿ ಪಡೆ ಈಗ ಟ್ರೆಂಟ್ ಬ್ರಿಜ್ ನ ನ್ಯಾಟಿಂಗ್ ಹ್ಯಾಮ್ ಗೆ ಬಂದಿಳಿದಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 159ರನ್ ಗಳಿಂದ ಕಳೆದುಕೊಂಡ ಕೊಹ್ಲಿ ಪಡೆಗೆ ಹೆಚ್ಚಿನ ಬಲ ಸಿಗಬೇಕಿದೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಇಂಗ್ಲೆಂಡಿನಲ್ಲಿ ಉಭಯ ತಂಡಗಳು 59 ಬಾರಿ ಸಂಧಿಸಿದ್ದು, 32 ಬಾರಿ ಇಂಗ್ಲೆಂಡ್ ಗೆಲುವು ದಾಖಲಿಸಿದ್ದು, 6 ಬಾರಿ ಭಾರತ ಗೆಲುವು ಗಳಿಸಿದ್ದು, 21 ಪಂದ್ಯಗಳು ಡ್ರಾನಲ್ಲಿ ಅಂತ್ಯಕಂಡಿವೆ.

ಭಾರತದಲ್ಲಿ ತಂಡದ ಆಯ್ಕೆ ಸಮಸ್ಯೆ ಮುಗಿದಿಲ್ಲ. ಆರಂಭಿಕ ಆಟಗಾರರು, ಮಧ್ಯಮ ಕ್ರಮಾಂಕ, ಸ್ಪಿನ್ನರ್ ಗಳ ಆಯ್ಕೆ ಸಮಸ್ಯೆ ಜತೆಗೆ ಗಾಯಾಳುಗಳ ಸಮಸ್ಯೆ ಬಗೆಹರಿದಿಲ್ಲ. ಖುದ್ದು ಕೊಹ್ಲಿ ಅವರು ಕೂಡಾ ಸಂಪೂರ್ಣ ಫಿಟ್ ಆಗಿಲ್ಲ.

ರಿಷಬ್ ಪಂತ್ ಆಯ್ಕೆ ನಿರೀಕ್ಷೆ

ರಿಷಬ್ ಪಂತ್ ಆಯ್ಕೆ ನಿರೀಕ್ಷೆ

ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ

ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಬಲ

ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಬಲ

ಅಲೆಸ್ಟರ್ ಕುಕ್, ಕೀಟನ್ ಜೆನ್ನಿಂಗ್ಸ್, ಜೋ ರೂಟ್ (ನಾಯಕ), ಓಲಿ ಪೋಪ್, ಜೋಸ್ ಬಟ್ಲರ್, ಜಾನಿ ಬೈರ್ಸ್ಟೋ(ವಿಕೆಟ್ ಕೀಪರ್), ಸ್ಯಾಮ್ ಕುರನ್, ಕ್ರಿಸ್ ವೋಕ್ಸ್, ಅದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ಇಶಾಂತ್ ಶರ್ಮ

ಇಶಾಂತ್ ಶರ್ಮ

ಇಶಾಂತ್ ಶರ್ಮ ಅವರಿಗೆ ಇನ್ನು 6 ವಿಕೆಟ್ ಗಳು ಸಿಕ್ಕರರೆ 250 ವಿಕೆಟ್ ಗಳಿಸಿದ್ದಂತಾಗುತ್ತದೆ. 250 ವಿಕೆಟ್ ಗಳಿಸಿದ 7ನೇ ಬೌಲರ್ ಎನಿಸಿಕೊಂಡರು.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಉಪ ನಾಯಕ ಅಜಿಂಕ್ಯ ರಹಾನೆ ಅವರು 90ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ 3000ರನ್ ಗಡಿ ದಾಟುತ್ತಾರೆ. ಈ ಗುರಿ ತಲುಪಿದ 22ನೇ ಬ್ಯಾಟ್ಸ್ ಮನ್ ಎನಿಸಲಿದ್ದಾರೆ.

Story first published: Friday, August 17, 2018, 17:31 [IST]
Other articles published on Aug 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X