For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಆರ್‌ ಅಶ್ವಿನ್ ಹೆಸರಲ್ಲಿ ಮತ್ತೊಂದು ದಾಖಲೆ

India vs England: R Ashwin created unique record

ಚೆನ್ನೈ: ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿರುವ ಅಶ್ವಿನ್, ಹಲವಾರು ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಆರ್‌ ಅಶ್ವಿನ್ ಶತಕ ಬಾರಿಸಿದ್ದರು. ಅಶ್ವಿನ್ ಈ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದಾರೆ.

ಬೌಲಿಂಗ್ ಆಲ್ ರೌಂಡರ್ ಆಗಿರುವ ಅಶ್ವಿನ್, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದರು. ಅಲ್ಲದೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 148 ಎಸೆತಗಳಲ್ಲಿ 106 ರನ್ ಬಾರಿಸಿ ಮಿಂಚಿದ್ದರು. ಅಶ್ವಿನ್ ಶತಕದ ನೆರವಿನಿಂದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 286 ರನ್ ಬಾರಿಸಲು ಸಾಧ್ಯವಾಗಿತ್ತು.

ಅಂದ್ಹಾಗೆ, ಅಶ್ವಿನ್ ಈ ಪಂದ್ಯದಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು ಶತಕ ಬಾರಿಸಿದ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ.
(ಟೆಸ್ಟ್‌ ಕ್ರಿಕೆಟ್‌ನಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು ಹೆಚ್ಚು ಬಾರಿ ಶತಕ ಬಾರಿಸಿದ ಆಟಗಾರರ ಪಟ್ಟಿ ಇಲ್ಲಿದೆ)
* ಡೇನಿಯಲ್ ವೆಟೋರಿ, ನ್ಯೂಜಿಲೆಂಡ್, 4 ಸಾರಿ
* ಆರ್‌ ಅಶ್ವಿನ್, ಭಾರತ, 3 ಸಾರಿ
* ಕಮ್ರನ್ ಅಕ್ಮಲ್, ಪಾಕಿಸ್ತಾನ, 3 ಸಾರಿ

Story first published: Monday, February 15, 2021, 23:13 [IST]
Other articles published on Feb 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+