Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದ್ಭುತ ಪ್ರದರ್ಶನದ ಹಿಂದಿನ ಗುಟ್ಟು ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್

India vs England: R Ashwin reveals secret behind dream run in Tests

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಭಾರತದ ಗೆಲುವಿನಲ್ಲಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ತಾನು ಹೆಚ್ಚು ಉತ್ತಮ ಪ್ರದರ್ಶನ ನೀಡುತ್ತಿರುವ ಹಿಂದಿನ ಗುಟ್ಟನ್ನು ಅಶ್ವಿನ್ ಹೇಳಿಕೊಂಡಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ತೃತೀಯ ಟೆಸ್ಟ್‌ನಲ್ಲಿ ಆರ್‌ ಅಶ್ವಿನ್ 3+4 ವಿಕೆಟ್ ಪಡೆದಿದ್ದರು. ಭಾರತ ಈ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿತ್ತಲ್ಲದೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1ರ ಮುನ್ನಡೆಯೂ ಸಾಧಿಸಿತ್ತು.

ಇದೇ ಪಂದ್ಯದಲ್ಲಿ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600+ ವಿಕೆಟ್ ಪಡೆದ ಭಾರತೀಯರ ಸಾಲಿನಲ್ಲಿ 4ನೇ ಸ್ಥಾನಕ್ಕೇರಿದ್ದರು. ಈ ದಾಖಲೆ ಪಟ್ಟಿಯಲ್ಲಿರುವ ಕನ್ನಡಿಗ ಅನಿಲ್ ಕುಂಬ್ಳೆ (953 ವಿಕೆಟ್), ಹರ್ಭಜನ್ ಸಿಂಗ್ (707), ಕಪಿಲ್ ದೇವ್ (687), ಅಶ್ವಿನ್ (601*), ಝಹೀರ್ ಖಾನ್ 597 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 400 ವಿಕೆಟ್ ದಾಖಲೆ ಕೂಡ ಅಶ್ವಿನ್‌ ಹೆಸರಿಗೆ ಸೇರಿದೆ.

ಪಂದ್ಯದ ಬಳಿಕ ಮಾತನಾಡಿದ ಅಶ್ವಿನ್, 'ಐಪಿಎಲ್‌ನಲ್ಲೂ ನನ್ನ ಬೌಲಿಂಗ್ ಸೊಗಸಾಗಿ ಬರುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ನಾನು 7-8 ಕೆಜಿ ತೂಕ ಕಳೆದುಕೊಂಡೆ. ಹೀಗಾಗಿ ನನ್ನ ಪ್ರದರ್ಶನದಲ್ಲೂ ಗಮನಾರ್ಹ ಸುಧಾರಣೆ ಕಂಡಿದೆ,' ಎಂದಿದ್ದಾರೆ.

Story first published: Friday, February 26, 2021, 6:30 [IST]
Other articles published on Feb 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+