For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ vs ಭಾರತ: ದಾಖಲೆಗಳ ದಾಖಲೆ ಬರೆದ ಆರ್‌ ಅಶ್ವಿನ್

India vs England: R Ashwin taken 600 Wickets, Surpasses Zaheer Khan

ಅಹ್ಮದಾಬಾದ್: ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ದಾಖಲೆಗಳ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಶ್ವಿನ್ 600+ ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ದಾಖಲೆ ಸಾಲಿನಲ್ಲಿ ಭಾರತದ ಮಾಜಿ ವೇಗಿ ಝಹೀರ್ ಖಾನ್ ಹೆಸರಿನಲ್ಲಿದ್ದ ಸಾಧನೆ ಬದಿಗೆ ಸರಿದಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 77ನೇ ಟೆಸ್ಟ್‌ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ಆರ್‌ ಅಶ್ವಿನ್ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 3+2* (25 ಓವರ್‌ ಮುಕ್ತಾಯದ ವೇಳೆಗೆ) ಪಡೆದಿದ್ದರು. ಇದರೊಂದಿಗೆ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600+ ವಿಕೆಟ್‌ಗಳ ದಾಖಲೆ ನಿರ್ಮಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯರ ದಾಖಲೆ ಸಾಲಿನಲ್ಲಿ ಈಗ ಅಶ್ವಿನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಮಾಜಿ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ (953 ವಿಕೆಟ್), 2ರಲ್ಲಿ ಹರ್ಭಜನ್ ಸಿಂಗ್ (707), 3ರಲ್ಲಿ ಕಪಿಲ್ ದೇವ್ (687), 4ರಲ್ಲಿ ಅಶ್ವಿನ್ (601*), 5ರಲ್ಲಿ ಝಹೀರ್ ಖಾನ್ (597) ಇದ್ದಾರೆ.

ಇದೇ ಪಂದ್ಯದಲ್ಲಿ ಅಶ್ವಿನ್ 400 ವಿಕೆಟ್ ಸಾಧನೆ ಕೂಡ ಮಾಡಿದ್ದಾರೆ. ವಿಶ್ವದಲ್ಲಿ ಟೆಸ್ಟ್‌ನಲ್ಲಿ ಅತೀ ವೇಗವಾಗಿ 400 ವಿಕೆಟ್ ಪಡೆದ ಸಾಧಕರಲ್ಲಿ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 72 ಇನ್ನಿಂಗ್ಸ್‌ಗಳಲ್ಲಿ 400 ಟೆಸ್ಟ್‌ ವಿಕೆಟ್‌ಗಳನ್ನು ಪಡೆದಿದ್ದರೆ, ಅಶ್ವಿನ್ 77 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮತ್ತು ರಿಚರ್ಡ್ ಹ್ಯಾಡ್ಲೀ 80 ಇನ್ನಿಂಗ್ಸ್‌ಗಳಲ್ಲಿ 400 ವಿಕೆಟ್ ಪಡೆದಿದ್ದಾರೆ.

Story first published: Friday, February 26, 2021, 8:49 [IST]
Other articles published on Feb 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+