ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಪೂಜಾರ, ರಹಾನೆ ಬೆಂಬಲಕ್ಕೆ ನಿಂತ ಕೆಎಲ್ ರಾಹುಲ್

India vs England: Rahane, Pujara world class players says KL Rahul

ಲಂಡನ್, ಆಗಸ್ಟ್ 14: ಲಾರ್ಡ್ಸ್ ಟೆಸ್ಟ್ ಪಂದ್ಯ ಭರ್ಜರಿ ಶತಕವನ್ನು ಸಿಡಿಸಿ ಮಿಂಚಿರುವ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್‌ ಟೀಮ್ ಇಂಡಿಯಾದ ಅನುಭವಿ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಫಾರ್ಮ್ ಕೊರತೆಯಿಂದ ಸಾಕಷ್ಟು ಟೀಕೆಗೆ ಒಳಗಾಗಿರುವ ಚೇತೇಶ್ವರ್ ಪೂಜಾರ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ಶೀಘ್ರದಲ್ಲಿಯೇ ಫಾರ್ಮ್‌ಗೆ ಮರಳಲಿದ್ದಾರೆ, ಇಬ್ಬರು ಆಟಗಾರರು ಕೂಡ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳು ಎಂದು ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಟೀಮ್ ಇಂಡಿಯಾದ ಅನುಭವು ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಈ ವರ್ಷ ಆಡಿದ ಟೆಸ್ಟ್ ಪಂದ್ಯಗಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಇಬ್ಬರು ಕೂಡ 20ರ ಆಸುಪಾಸಿನಲ್ಲಿ ಸರಾಸರಿಯನ್ನು ಹೊಂದಿರುವುದು ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇಂಗ್ಲೆಂಡ್‌ ವಿರುದ್ಧದ ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ 4, 12* ಹಾಗೂ 9 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಇನ್ನು ರಹಾನೆ ಆ ಸರಣಿಯಲ್ಲಿ ಆಡಿರುವ ಎರಡು ಇನ್ನಿಂಗ್ಸ್‌ನಲ್ಲಿ 5 ಹಾಗೂ 1 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ.

ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

"ಪೂಜಾರ ಹಾಗೂ ರಹಾನೆ ಟೀಮ್ ಇಂಡಿಯಾ ಸಂಕಷ್ಟದ ಸಂದರ್ಭದಲ್ಲಿದ್ದಾಗ ಸಾಕಷ್ಟು ಬಾರಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅವರಿಬ್ಬರು ಕೂಡ ವಿಶ್ವದರ್ಜೆಯ ಆಟಗಾರರು ಹಾಗೂ ಅನುಭವಿಗಳು. ಒಂದೆರಡು ಪಂದ್ಯಗಳಲ್ಲಿ ರನ್‌ಗಳಿಸಲು ಸಾಧ್ಯವಾಗದಂತಾ ಸಂದರ್ಭಗಳಲ್ಲಿ ಅದರಿಂದ ಹೇಗೆ ಹೊರಬರಬೇಕೆಂಬುದು ಅವರಿಗೆ ತಿಳಿದಿದೆ" ಎಂದು ಕೆಎಲ್ ರಾಹುಲ್ ಎರಡನೇ ದಿನದಾಟದ ನಂತರ ನಡೆದ ಮಾದ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

"ನೀವು ಮತ್ತೊಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಬ್ಬರು ಕಠಿಣ ಪರಿಸ್ಥಿತಿಯಲ್ಲಿ ಆಡುತ್ತಿದ್ದಾರೆ. ಇಂಗ್ಲೀಷ್ ನಾಡಿನಲ್ಲಿ ಬ್ಯಾಟಿಂಗ್ ನಡೆಸುವುದು ಯಾವಾಗಲೂ ಸವಾಲಿನ ಸಂಗತಿಯಾಗಿದೆ. ನೀವು ತುಂಬಾ ಅತ್ಯುತ್ತಮ ಎಸೆಯಗಳನ್ನು ಎದುರಿಸುತ್ತೀರಿ. ಪ್ರತಿ ಇನ್ನಿಂಗ್ಸ್‌ನಲ್ಲಿಯೂ ನೀವು ಹೆಚ್ಚಿನ ರನ್‌ಗಳನ್ನು ಗಳಿಸುವುದು ಸಾಧ್ಯವಾಗದು. ಆದರೆ ನೀವು ಉತ್ತಮ ಆರಂಭವನ್ನು ಪಡೆದರೆ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ ಆರಂಭ ತುಂಬಾ ಚೆನ್ನಾಗಿರಬೇಕಾಗುತ್ತದೆ" ಎಂದು ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ಲಾರ್ಡ್ಸ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದು ಶತಕವನ್ನು ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ 129 ರನ್‌ಗಳನ್ನು ಗಳಿಸಿ ಔಟಾದರು.

ಆದರೆ ಈ ಸಮದರ್ನದಲ್ಲಿ ಕೆಎಲ್ ರಾಹುಲ್ ಮತ್ತಷ್ಟು ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗದಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಶುಕ್ರವಾರದ ಆಟದಲ್ಲಿ ಕೇವಲ ತಮ್ಮ ಸ್ಓರ್‌ಗೆ ಎರಡು ರನ್‌ಗಳನ್ನು ಮಾತ್ರವೇ ಸೆರಿಸಲು ರಾಹುಲ್‌ಗೆ ಸಾಧ್ಯವಾಗಿತ್ತು. "ನಾನು ಕ್ರೀಸ್‌ನಲ್ಲಿ ಸೆಟ್‌ ಆಗಿದ್ದ ಬಳಿಕ ಔಟ್ ಆದ ಕಾರಣಕ್ಕೆ ನಾನು ನಿರಾಶೆಗೊಂಡೆ. ಖಂಡಿತವಾಗಿಯೂ ಎರಡನೇ ದಿನದಾಟ ನಮ್ಮ ಪಾಲಿಗೆ ಅತ್ಯಂತ ನಿರ್ಣಾಯಕವಾಗಿತ್ತು" ಎಂದು ಕೆಎಲ್ ರಾಹುಲ್ ಹೇಳಿಕೆಯನ್ನು ನೀಡಿದ್ದಾರೆ.

ಮೂರನೇ ದಿನದಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್ ನಡೆಸುತ್ತಿದ್ದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಶತಕ ಭರ್ಜರಿ ಶತಕ ಸಿಡಿಸಿ ಆಟವನ್ನು ಮುಂದುವರಿಸಿದ್ದಾರೆ ಜಾನಿ ಬೈರ್‌ಸ್ಟೋವ್ ಅರ್ದ ಶತಕ ಗಳಿಸಿ ಔಟಾದರು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಸವಾಲಿಗೆ ಅದ್ಭುತವಾಗಿ ಪ್ರತಿರೋಧವನ್ನು ಒಡ್ಡುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ.

ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಬಳಗ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.

Story first published: Saturday, August 14, 2021, 19:44 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X