
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಭಾರತದ ಯುವ ಸ್ಪಿನ್ನರ್ ರಾಹುಲ್ ಚಾಹರ್ ವಿರಾಟ್ ಕೊಹ್ಲಿ ಪಡೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಟಿ20ಐ ಸರಣಿಗಾಗಿ ಆಯ್ಕೆಯಾಗಿದ್ದ ರಾಹುಲ್ ತೆವಾಟಿಯಾ ಮತ್ತು ವರುಣ್ ಚಕ್ರವರ್ತಿ ಫಿಟ್‌ನೆಟ್ ಪರೀಕ್ಷೆಯಲ್ಲಿ ಫೇಲ್ ಆಗಿರುವುದರಿಂದ ಚಾಹರ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಕ್ರಿಕ್‌ಬಝ್ ವರದಿಯ ಪ್ರಕಾರ, ಟೆಸ್ಟ್ ಸರಣಿಯಿಂದಲೇ ರಾಹುಲ್ ಚಾಹರ್ ಟೀಮ್ ಇಂಡಿಯಾ ಜೊತೆಗೆ ಬಯೋಬಬಲ್‌ನಲ್ಲಿದ್ದಾರೆ. ಹೀಗಾಗಿ ಚಾಹರ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. 21ರ ಹರೆಯದ ಲೆಗ್ ಸ್ಪಿನ್ನರ್ ಆಗಿರುವ ಚಾಹರ್ ಸೋಮವಾರ (ಮಾರ್ಚ್ 7) ಭಾರತದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 12ರಿಂದ ಭಾರತ-ಇಂಗ್ಲೆಂಡ್ ಟಿ20ಐ ಸರಣಿ ಆರಂಭಗೊಳ್ಳಲಿದೆ.
ಇನ್ನು ಕೆಎಸ್ ಭರತ್, ಅಭಿಮನ್ಯು ಈಶ್ವರನ್, ಶಹಬಾಝ್ ನದೀಮ್, ಪ್ರಯಾಂಕ್ ಪಾಂಚಲ್ ಮೀಸಲು ಆಟಗಾರರ ಸಾಲಿನಲ್ಲಿದ್ದಾರೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುತ್ತಿದ್ದ ಈ ಆಟಗಾರರನ್ನು ರಾಷ್ಟ್ರೀಯ ತಂಡದ ಕರೆಯಿಂದಾಗಿ ಅವರು ಆಡುವ ತಂಡಗಳಿಂದ ರಿಲೀಸ್ ಮಾಡಲಾಗಿತ್ತು.
ಬಲಗೈ ಆರ್ಮ್‌ಬ್ರೇಕ್ ಬೌಲರ್ ಆಗಿರುವ ರಾಹುಲ್ ಚಾಹರ್, 1 ಟಿ20ಐ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದರು. 30 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಚಾಹರ್ 30 ವಿಕೆಟ್ ಪಡೆದಿದ್ದಾರೆ. ಭಾರತ ಅಂಡರ್ 19 ತಂಡದಲ್ಲಿ ಆಡಿದ್ದ ರಾಹುಲ್ ಸದ್ಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿದ್ದಾರೆ.