ರಿಷಭ್ ಪಂತ್ ಅಲ್ಲದೆ ಭಾರತೀಯ ತಂಡದಲ್ಲಿ ಇನ್ನೂ ಮೂವರಿಗೆ ಕೋವಿಡ್!

ಲಂಡನ್: ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್, ಥ್ರೋ ಡೌನ್ ಸ್ಪೆಷಾಲಿಸ್ಟ್ ದಯಾನಂದ್ ಗರಣಿ ಅಲ್ಲದೆ ಇನ್ನೂ ಇಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ. ಈ ಮೊದಲು ಭಾರತ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ ಪಾಸಿಟಿವ್ ಇದ್ದಿದ್ದಾಗಿ ಹೇಳಲಾಗಿತ್ತು, ಈಗ ತಂಡದ ಮೂವರು ಬೆಂಬಲ ಸಿಬ್ಬಂದಿಗೂ ಕೊರೊನಾ ತಾಕಿದೆ.
ಗುರುವಾರ (ಜುಲೈ 15) ಭಾರತೀಯ ತಂಡ ಡರ್‌ಹ್ಯಾಮ್‌ಗೆ ಪ್ರಯಾಣಿಸಿ ಅಲ್ಲಿರುವ ಬಯೋ ಬಬಲ್‌ಗೆ ಎಂಟ್ರಿಯಾಗಲಿದೆ. ಆದರೆ ಸೋಂಕು ತಗುಲಿದ್ದ ಕಾರಣ ರಿಷಭ್ ಪಂತ್ ತಂಡದ ಜೊತೆಗೆ ಡರ್‌ಹ್ಯಾಮ್‌ಗೆ ತೆರಳದೆ ಸೌಥಾಂಪ್ಟನ್‌ನಲ್ಲೇ ಕ್ವಾರಂಟೈನ್ ಪಾಲಿಸಲಿದ್ದಾರೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ತಿಳಿಸಿದೆ.
ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧವಾಗಿರುವ ವಿರಾಟ್ ಕೊಹ್ಲಿ ಪಡೆಗೆ ಈಗ ಕೋವಿಡ್ 19 ಭೀತಿ ಶುರುವಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡದ ಹಲವು ಆಟಗಾರರಿಗೆ ಸೋಂಕು ತಗುಲಿತ್ತು.

ಯೂರೋ ಪಂದ್ಯ ವೀಕ್ಷಿಸಿದ್ದ ಪಂತ್
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಳಿಕ ಭಾರತೀಯ ತಂಡಕ್ಕೆ 20 ದಿನಗಳ ಬಿಡುವು ನೀಡಲಾಗಿತ್ತು. ಈ ವೇಳೆ ಯೂರೋ 2020 ಫೈನಲ್ ಪಂದ್ಯವನ್ನು ರಿಷಭ್ ಪಂತ್, ಜಸ್‌ಪ್ರೀತ್ ಬೂಮ್ರಾ ಮತ್ತು ಹನುಮ ವಿಹಾರಿ ಬೆಂಬ್ಲಿ ಸ್ಟೇಡಿಯಂಗೆ ತೆರಳಿ ವೀಕ್ಷಿಸಿದ್ದರು. ಫೈನಲ್‌ನಲ್ಲಿ ಇಟಲಿ ಮತ್ತು ಇಂಗ್ಲೆಂಡ್ ಕಾದಾಡಿದ್ದವು. ಈ ವೇಳೆ ಪಂತ್‌ಗೆ ಕೋವಿಡ್ ಸೋಂಕು ತಗಲಿರಬಹುದು ಎಂದು ಹೇಳಲಾಗುತ್ತಿದೆ.

ಬಿಸಿಸಿಐ ಉಪಾಧ್ಯಕ್ಷ ಮಾತು
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಬಗ್ಗೆ ಮಾತನಾಡಿ, "ಹೌದು ಒಬ್ಬ ಆಟಗಾರ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಆದರೆ ಅವರು ಕಳೆದ ಎಂಟು ದಿನಗಳಿಂದ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಅವರು ಉಳಿದ ಆಟಗಾರರ ಜೊತೆಗೆ ಇಲ್ಲವಾದ್ದರಿಂದ ಬೇರೆ ಆಟಗಾರರಿಗೆ ಸೋಂಕು ತಗುಲಿಲ್ಲ. ಹಾಗಂತ ನಾನು ಆಟಗಾರರ ಹೆಸರು ಹೇಳಲಾಗದು," ಎಂದು ಶುಕ್ಲಾ ಹೇಳಿದ್ದಾರೆ. ಆದರೆ ಬೆಂಬಲ ಸಿಬ್ಬಂದಿಗಳಿಗೆ ಸೋಂಕು ತಗುಲಿರುವ ಸಂಗತಿಯನ್ನೂ ಶುಕ್ಲಾ ಹೇಳಿಲ್ಲ.

ಬೆಂಬಲ ಸಿಬ್ಬಂದಿ ಯಾರು?
ಕೋವಿಡ್-19 ಸೋಂಕು ತಗುಲಿರಬಹುದಾದ ಮೂವರು ಬೆಂಬಲ ಸಿಬ್ಬಂದಿಗಳು ಯಾರಿಬಹುದು ಎನ್ನುವ ಪ್ರಶ್ನೆ ಮೂಡೋದು ಸಹಜ. ಸದ್ಯ ಭಾರತೀಯ ತಂಡದಲ್ಲಿ ಬೆಂಬಲ ಸಿಬ್ಬಂದಿಗಳಾಗಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಶ್ರೀಧರ್, ಥ್ರೋ ಡೌನ್ ಸ್ಪೆಷಾಲಿಸ್ಟ್ ದಯಾನಂದ್ ಗುರಾಣಿ ಇದ್ದಾರೆ. ಇವರಲ್ಲಿ ಮೂವರಿಗೆ ಸೋಂಕು ತಗುಲಿರಬಹುದು. ಆದರೆ ಯಾರ ಹೆಸರನ್ನೂ ಬಿಸಿಸಿಐ ಬಹಿರಂಗಪಡಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications