
ಚೆನ್ನೈ: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೈದಾನದಲ್ಲಿದ್ದಾರೆಂದರೆ ಅಲ್ಲಿ ತಮಾಷೆಗೇನೂ ಕಮ್ಮಿಯಿರೋಲ್ಲ. ಮೈದಾನದಲ್ಲಿ ಕೋತಿಯಂತೆ ಪಲ್ಟಿ ಹೊಡೆಯುತ್ತ, ಸ್ಟಂಪ್ ಮೈಕ್ ಪಕ್ಕ ಏನೇನೋ ವಟಗುಟ್ಟುತ್ತಾ ಪಂತ್ ಏನಾದರೊಂದು ತರ್ಲೆ, ತಮಾಷೆಯಲ್ಲಿ ತೊಡಗಿರುತ್ತಾರೆ.
ಸದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಪಂತ್ ಆರಂಭದಲ್ಲಿ ಶುಕ್ರವಾರ, 'ಮೇರಾ ನಾಮ್ ಹೈ ವಾಷಿಂಗ್ಟನ್, ಮುಜೆ ಜಾನಾ ಹೈ ಡಿಸಿ' (ನನ್ನ ಹೆಸರು ವಾಷಿಂಗ್ಟನ್. ನನಗೆ ಡಿಸಿಗೆ ಹೋಗಬೇಕಿದೆ) ಎಂದು ಸುಂದರ್ ಮುಂದೆ ಹೇಳಿ ತಮಾಷೆಗೆ ಕಾರಣರಾಗಿದ್ದರು.
ಶನಿವಾರ (ಫೆಬ್ರವರಿ 6) ಜೋ ರೂಟ್ ಮತ್ತು ಆಲ್ಲಿ ಪೋಪ್ ಕ್ರೀಸ್‌ನಲ್ಲಿದ್ದಾಗ ಆರ್ ಅಶ್ವಿನ್ ಬೌಲಿಂಗ್‌ಗೆ ಬಂದಿದ್ದರು. ಪೋಪ್ ಸ್ಟ್ರೈಕ್‌ನಲ್ಲಿದ್ದಾಗ ಅಶ್ವಿನ್ ಎಸೆದ ಚೆಂಡು ಪೋಪ್ ಬ್ಯಾಟ್ ತಾಗಿ ಮೇಲೆ ಚಿಮ್ಮಿತು. ಆಗ ಸ್ಲಿಪ್‌ನಲ್ಲಿದ್ದ ಅಜಿಂಕ್ಯ ರಹಾನೆ ಲಾಂಗ್ ಸ್ಟಾಪ್ ಕಡೆಗೆ ಚೆಂಡು ತಡೆಯಲು ಓಡಿದರು. ಆಗ ಪಂತ್‌ಗೆ ಚೆಂಡು ಗಲ್ಲಿಯತ್ತ ಚಿಮ್ಮಿದಂತೆ ಕಂಡಿತೋ ಏನೋ. ಪಂತ್ ಬೇರೆಯತ್ತಲೇ ಓಡಿದರು.
ಪಂತ್ ಈ ಪರದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದ್ಹಾಗೆ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ಶನಿವಾರ ಎರಡನೇ ದಿನದಾಟದ ಅಂತ್ಯಕ್ಕೆ ರೋರಿ ಬರ್ನ್ಸ್ 33, ಡೊಮಿನಿಕ್ ಸಿಬ್ಲಿ 87, ಜೋ ರೂಟ್ 218, ಬೆನ್ ಸ್ಟೋಕ್ಸ್ 82, ಆಲ್ಲಿ ಪೋಪ್ 34, ಜೋಸ್ ಬಟ್ಲರ್ 30, ಡಮೊನಿಕ್ ಬೆಸ್ 28 ರನ್‌ನೊಂದಿಗೆ 180 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 555 ರನ್ ಗಳಿಸಿತ್ತು.