"ಆತ ನಿಜವಾದ ಮ್ಯಾಚ್ ವಿನ್ನರ್, ಆತನಿಲ್ಲದ ಭಾರತ ತಂಡವನ್ನು ಯೋಚಿಸುವುದು ಅಸಾಧ್ಯ"

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ ಭಾರತ ಏಕದಿನ ಸರಣಿಯನ್ನು ಕೂಡ ಟೀಮ್ ಇಂಡಿಯಾ ತನ್ನ ವಶಕ್ಕೆ ಪಡೆದಿದೆ. ಈ ಮೂಲಕ ಮೂರು ಮಾದರಿಯಲ್ಲೂ ಪ್ರವಾಸಿ ಇಂಗ್ಲೆಂಡ್ ಸರಣಿ ಸೋಲು ಕಂಡಿದ್ದು ಖಾಲಿ ಕೈಯ್ಯಲ್ಲಿ ವಾಪಾಸಾಗುವಂತೆ ಮಾಡಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಇಯಾನ್ ಬೆಲ್ ಭಾರತದ ಯುವ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಆತ ನಿಜವಾದ ಮ್ಯಾಚ್ ವಿನ್ನರ್ ಎಂದಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಟೀಮ್ ಇಂಡಿಯಾ ಪರವಾಗಿ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಾ ಸ್ಮರಣೀಯ ಗೆಲುವಿಗೆ ಈ ಯುವ ಆಟಗಾರ ಕಾರಣರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲೂ ತನ್ನ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಯಾನ್ ಬೆಲ್ ಹೇಳಿದ್ದು ಯಾರ ಬಗ್ಗೆ
ಹೌದು, ಇಯಾನ್ ಬೆಲ್ ಈ ರೀತಿ ಪ್ರಶಂಸೆಯ ಮಾತುಗಳನ್ನು ಆಡಿದ್ದು ಭಾರತದ ಯುವ ಆಟಗಾರ ರಿಷಭ್ ಪಂತ್ ಬಗ್ಗೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲೂ ನಿರ್ಣಾಯಕ ಪ್ರದರ್ಶನ ನೀಡಿ ಪಂತ್ ಗೆಲುವಿಗೆ ಕಾರಣರಾಗಿದ್ದರು. ಏಕದಿನ ಸರಣಿಯಲ್ಲಿ ಎರಡು ನಿರ್ಣಾಯಕ ಅರ್ಧ ಶತಕ ಗಳಿಸಿದ್ದರು ಪಂತ್

ಪಂತ್ ಇಲ್ಲದೆ ಭಾರತ ತಂಡವನ್ನು ಊಹಿಸಲು ಸಾಧ್ಯವಿಲ್ಲ
"ಈಗ ನಾನು ಭಾರತ ಕ್ರಿಕೆಟ್ ತಂಡವನ್ನು ರಿಷಭ್ ಪಂತ್ ಇಲ್ಲದೆ ಊಹಿಸಲು ಸಾಧ್ಯವಾಗುತ್ತಿಲ್ಲ. ಕೆಲ ವಿಶ್ವಶ್ರೇಷ್ಠ ಆಟಗಾರರ ಮಧ್ಯೆ ಭವಿಷ್ಯದ ಆಟಗಾರನಾಗಿ ಬೆಳೆಯುತ್ತಾನೆ" ಎಂದು ಇಯಾನ್ ಬೆಲ್ ರಿಷಭ್ ಪಂತ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು 78 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಹೀಗಾಗಿ ಭಾರತ 330 ರನ್‌ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಲು ಸಾಧ್ಯವಾಗಿತ್ತು.

ಪ್ರಬುದ್ಧ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಪಂತ್
ನಾವು ಆತನಿಂದ ಪ್ರಬುದ್ಧ ಸರಣಿಯನ್ನು ನೋಡಿದ್ದೇವೆ. ಯಾರಾದರೂ ಹಾಗೆ ಆಡುತ್ತಿರುವುದನ್ನು ನೋಡಿದ ಕ್ಷಣದಲ್ಲಿ ಅದು ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಆತನದ್ದು ಅತಿ ಅಪರೂಪದ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. ಆತನ ಯಶಸ್ವಿ ವೃತ್ತಿಜೀವನ ಈಗತಾನೇ ಪ್ರಾರಂಭವಾಗಿದೆ. ಅದನ್ನು ನೋಡಿದರೆ ನಂಬಲಸಾಧ್ಯವಾದಂತಿದೆ. ಆತ ನಿಜಕ್ಕೂ ಮ್ಯಾಚ್ ವಿನ್ನರ್" ಎಂದು ಇಯಾನ್ ಬೆಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications