ಇಂಗ್ಲೆಂಡ್ ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಪಂತ್!

ಲಂಡನ್, ಸೆಪ್ಟೆಂಬರ್ 12: ಇಂಗ್ಲೆಂಡ್ vs ಭಾರತ ಟೆಸ್ಟ್ ಸರಣಿಯೊಂದಿಗೆ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಭಾರತದ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಸರಣಿಯ ಕೊನೆಯ ಟೆಸ್ಟ್ ನಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ. ಅಂತಿಮ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಪಂತ್ 114 ರನ್ ಗಳಿಸಿದರು.
ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ರಿಷಬ್ ಮೊದಲ ಶತಕ ಬಾರಿದ್ದಷ್ಟೇ ಅಲ್ಲ, ಇಂಗ್ಲೆಂಡ್ ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನಿಂಗ್ಸ್ ನಲ್ಲಿ ಒಟ್ಟು 15 ಬೌಂಡರಿ ಮತ್ತು 4 ಸಿಕ್ಸರ್ ಮೂಲಕ ಪಂತ್ ಶತಕ ಸಹಿತ 114 ರನ್ ಕಲೆ ಹಾಕಿದರು.
ಇನ್ನಿಂಗ್ಸ್ ನಲ್ಲಿ ಇನ್ನೊಬ್ಬ ಶತಕದಾರ ಕೆಎಲ್ ರಾಹುಲ್ ಅವರೊಂದಿಗೆ ಉತ್ತಮ ಜೊತೆಯಾಟ ನೀಡಿದ ಪಂತ್ ಪಾರ್ಟ್ನರ್ ಶಿಪ್ ನಲ್ಲಿ 150ಕ್ಕೂ ಹೆಚ್ಚು ರನ್ ಸೇರಿಸಿದರು. ಇಬ್ಬರ ಜೊತೆಯಾಟ ಪ್ರವಾಸಿ ಭಾರತಕ್ಕೆ ಕೊನೆಯ ಪಂದ್ಯವನ್ನು ಗೆದ್ದುಕೊಳ್ಳುವ ಆಶಾಭಾವನೆ ಮೂಡಿಸಿತ್ತಾದರೂ ಅಂತಿಮವಾಗಿ ಪಂದ್ಯ ಆಂಗ್ಲರ ವಶವಾಯಿತು.
ಅಪರೂಪದ ಶತಕವನ್ನು ಪಂತ್ ಪೂರೈಸಿಕೊಂಡಿದ್ದು ಸಿಕ್ಸರ್ ಬಾರಿಸುವ ಮೂಲಕ ಎನ್ನುವುದೂ ವಿಶೇಷ. ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 4-1ರಿಂದ ಜಯಿಸಿತಾದರೂ ಪಂತ್, ರಾಹುಲ್ ಸಾಧನೆ ಗಮನಾರ್ಹವೆನಿಸಿತು. ಈ ಕೊನೆಯ ಟೆಸ್ಟ್ ಬಳಿಕ ಇಂಗ್ಲೆಂಡ್ ಆಟಗಾರ ಅಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರಿಂದಲೂ ಪಂದ್ಯ ಮಹತ್ವದ್ದೆನಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications