For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 3ನೇ ಟೆಸ್ಟ್ ನಲ್ಲಿ ಪಾದಾರ್ಪಣೆಗೆ ರಿಷಬ್ ಪಂತ್ ಸಜ್ಜು

India vs England: Rishabh Pant set to make debut in third Test

ನಾಟ್ಟಿಂಗ್ಹ್ಯಾಮ್, ಆಗಸ್ಟ್ 17: ನಾಟ್ಟಿಂಗ್ಹ್ಯಾಮ್ ನ ಟ್ರೆಂಡ್ ಬ್ರಿಡ್ಜ್ ನಲ್ಲಿ ಆಗಸ್ಟ್ 18ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ vs ಭಾರತ 3ನೇ ಟೆಸ್ಟ್ ಪಂದ್ಯಾಟಕ್ಕೆ ಯುವ ಆಟಗಾರ ರಿಷಬ್ ಪಂತ್ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಗುರುವಾರ ನಡೆದ ಅಭ್ಯಾಸದಲ್ಲಿ ಪಂತ್ ಭಾರತ ತಂಡದೊಂದಿಗೆ ಪಾಲ್ಗೊಂಡಿದ್ದು, ರಿಷಬ್ ತಂಡಕ್ಕೆ ಸೇರ್ಪಡೆ ಬಹುತೇಕ ಖಚಿತವಾಗಿದೆ.

ದೆಹಲಿಯ ಆಟಗಾರರಾಗಿರುವ ಪಂತ್ ಭಾರತ ತಂಡಕ್ಕೆ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಬಲ ತುಂಬಬಲ್ಲರು. ಹೀಗಾಗಿ ಮೂರನೇ ಟೆಸ್ಟ್ ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಪಂತ್ ಸೇರಿಕೊಳ್ಳಲಿದ್ದಾರೆ. ರಿಷಬ್ ಪಂತ್ ಅವರನ್ನು ತಂಡಕ್ಕೆ ಸೇರಿಸುವಂತೆ ಕ್ರಿಕೆಟ್ ದಿಗ್ಗಜ ದಿಲೀಪ್ ವೆಂಗ್ ಸರ್ಕಾರ್ ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಪಂತ್ ಟೀಮ್ ಇಂಡಿಯಾ ಸೇರಿಕೊಳ್ಳುವುದರಲ್ಲಿದ್ದಾರೆ.

ಗಾಯಕ್ಕೀಡಾಗಿರುವ ನಾಯಕ ಕೊಹ್ಲಿ ಸಂಪೂರ್ಣ ಚೇತರಿಸಿಕೊಂಡಿದ್ದಾರೋ ಇಲ್ಲವೊ ಎಂಬುದು ಖಚಿತವಾಗಿಲ್ಲ. ಆದರೆ ಕೊಹ್ಲಿಯೂ ಮೂರನೇ ಟೆಸ್ಟ ನಲ್ಲಿ ಕಾಣಿಸಿಕೊಳ್ಳುವುದರಲ್ಲಿದ್ದಾರೆ. ಗಾಯಾಳು ಬುಮ್ರಾ, ಶಿಖರ್ ಧವನ್ ಬೆಂಬಲ ತಂಡಕ್ಕೆ ಲಭಿಸಲಿದೆ.

ಮೂರನೇ ಟೆಸ್ಟ್ ನಲ್ಲಿ ಯುವ ಆಟಗಾರ ರಿಷಬ್ ಚೆನ್ನಾಗಿ ಆಡಿದರೆ ತಂಡ ಮತ್ತೆ ಗೆಲುವಿನ ದಾರಿ ಹಿಡಿಯಲು ಸಾಧ್ಯವಿದೆ. ಅಂತೂ ಮೂರನೇ ಟೆಸ್ಟ್ ಹೆಚ್ಚು ಕುತೂಹಲ ಮೂಡಿಸಿದೆ.

Story first published: Friday, August 17, 2018, 19:08 [IST]
Other articles published on Aug 17, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+