For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15000 ರನ್ ಗಡಿ ತಲುಪಿದ ಹಿಟ್‌ಮ್ಯಾನ್

India vs England: Rohit Sharma breaches the 15000 run mark in International Cricket

ಲಂಡನ್‌: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶಿಷ್ಠ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20ಐ ಸೇರಿ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15000 ರನ್ ಗಡಿ ತಲುಪಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಶರ್ಮಾ ಈ ದಾಖಲೆ ನಿರ್ಮಿಸಿದ್ದಾರೆ.

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಭಾರತದ ಮಧ್ಯೆ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ 11, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 20 ರನ್ ಬಾರಿಸುವ ಮೂಲಕ ರೋಹಿತ್ ಶರ್ಮಾ 15000 ಅಂತಾರಾಷ್ಟ್ರೀಯ ರನ್ ಗಡಿ ತಲುಪಿದ್ದಾರೆ. ಶರ್ಮಾಗೆ ಅಭಿನಂದಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಟ್ವೀಟ್ ಮಾಡಿದೆ.

34ರ ಹರೆಯದ ರೋಹಿತ್ ಶರ್ಮಾ 43 ಟೆಸ್ಟ್‌ ಪಂದ್ಯಗಳಲ್ಲಿ 2940 ರನ್, 7 ಶತಕ, 1 ದ್ವಿಶತಕ, 227 ಏಕದಿನ ಪಂದ್ಯಗಳಲ್ಲಿ 9205 ರನ್, 29 ಶತಕ, 3 ದ್ವಿಶತಕ, 111 ಟಿ20ಐ ಪಂದ್ಯಗಳಲ್ಲಿ 2864 ರನ್, 4 ಶತಕಗಳ ದಾಖಲೆ ಹೊಂದಿದ್ದಾರೆ. 207 ಐಪಿಎಲ್ ಪಂದ್ಯಗಳಲ್ಲಿ 5480 ಶತಕ, 1 ಶತಕದ ದಾಖಲೆ ಹೊಂದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮಾ 11, ಕೆಎಲ್ ರಾಹುಲ್ 17, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್ 57, ಉಮೇಶ್ ಯಾದವ್ 10, ಮೊಹಮ್ಮದ್ ಸಿರಾಜ್ 1 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು.

ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಜೋ ರೂಟ್ 21, ಆಲಿ ಪೋಪ್ 81, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು. ಭಾರತ ಈಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.

Story first published: Saturday, September 4, 2021, 9:41 [IST]
Other articles published on Sep 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+