ರೋಹಿತ್ ಶರ್ಮಾ ಅಪ್ಪಿ ಸಂಭ್ರಮಾಚರಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

ಲಂಡನ್: ಟಿಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಬಾಂಧವ್ಯ ಚೆನ್ನಾಗಿಲ್ಲ ಎನ್ನೋ ಮಾತುಗಳು ಆಗೀಗ ಕೇಳಿ ಬರುತ್ತಿರುತ್ತವೆ. ಒಂದೇ ತಂಡದಲ್ಲಿ ಆಡುತ್ತಿದ್ದರೂ ಇಬ್ಬರ ಮಧ್ಯೆ ಅಂಥ ಅಂಡರ್‌ಸ್ಟ್ಯಾಂಡಿಂಗ್ ಇಲ್ಲ ಎಂದೇ ಹೆಚ್ಚಿನವರು ಹೇಳುತ್ತಿರುತ್ತಾರೆ. ಪಂದ್ಯಗಳ ವೇಳೆ ಅನೇಕ ಸಂದರ್ಭಗಳಲ್ಲಿ ನಮಗೂ ಹಾಗೇ ಅನ್ನಿಸಿದ್ದಿದೆ.
ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಮನಸ್ತಾಪವಿದೆ ಎಂಬಂತೆ ಒಂದೆರಡು ವಿಡಿಯೋಗಳು ಕಾಣಸಿಕ್ಕಿದ್ದಿದೆ. ಅದೇನೇ ಇರಲಿ; ಇತ್ತೀಚಿನ ವಿಡಿಯೋವೊಂದರಲ್ಲಿ ಕೊಹ್ಲಿ ಮತ್ತು ವಿರಾಟ್ ಇಬ್ಬರೂ ಪರಸ್ಪರ ಅಪ್ಪಿ ಸಂಭ್ರಮಾಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಕ್ಯಾಚ್‌ಗಾಗಿ ರೋಹಿತ್ ಅವರು ಕೊಹ್ಲಿ ಅವರನ್ನು ಅಪ್ಪಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ನೋಡಿದ ಯಾರಿಗಾದರೂ, 'ಛೆ, ಕೊಹ್ಲಿ ಮತ್ತು ರೋಹಿತ್ ಮಧ್ಯೆ ಖಂಡಿತಾ ಮನಸ್ತಾಪ ಇಲ್ಲಪ್ಪ' ಅನ್ನಿಸುತ್ತದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಡಾವಿಡ್ ಮಲನ್, ಉಮೇಶ್ ಯಾದವ್ ಅವರ 24.3ನೇ ಓವರ್‌ನಲ್ಲಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ 31 ರನ್‌ಗೆ ನಿರ್ಗಮಿಸಿದರು. ಮಲನ್ ಕ್ಯಾಚನ್ನು ರೋಹಿತ್ ಜಿಗಿದು ಪಡೆದಿದ್ದು ನೋಡಿ ನಾಯಕ ಕೊಹ್ಲಿ ತುಂಬಾ ಖುಷಿಯಾದರು. ಇದೇ ಕಾರಣಕ್ಕೆ ಕೊಹ್ಲಿ, ರೋಹಿತ್ ಅವರನ್ನು ತಬ್ಬಿ ವಿಕೆಟ್ ಸಂಭ್ರಮಾಚರಿಸಿದ್ದರು.
ಅಂದ್ಹಾಗೆ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ವಿರಾಟ್ ಕೊಹ್ಲಿ 50, ಶಾರ್ದೂಲ್ ಠಾಕೂರ್ 57 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು. ಇನ್ನಿಂಗ್ಸ್ ಆಡುತ್ತಿರುವ ಇಂಗ್ಲೆಂಡ್ ಮುನ್ನಡೆಯಲ್ಲಿದೆ. ಆದರೆ ಇಂಗ್ಲೆಂಡ್ ಪ್ರಮುಖ ವಿಕೆಟ್‌ಗಳು ಈಗಾಗಲೇ ಪತನವಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications